1963 ರಲ್ಲಿ ಬಿಡುಗಡೆಯಾದ ತಾಜ ಮಹಲ್ ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿದ ಈ ಹಾಡನ್ನು ನಾನು ಈಗ ಸಂಪೂರ್ಣವಾಗಿ ಅನುವಾದಿಸಿದ್ದೇನೆ ( ಈ ಹಾಡಿಗೆ ನಾನು ಕೊಟ್ಟ ಸಂಖ್ಯೆ 592). ಅದು ಇಲ್ಲಿದೆ.
ದೇವಾಧಿದೇವಾ ನಿನ ಭೂಮಿ ಮೇಲೆ ಭೂಮಿಗಾಗಿ ಈ ಕದನ ಏಕೆ?
ಪ್ರತಿ ಸೋಲು ಗೆಲುವಿನ ಅಡಿಯಲ್ಲಿ ಮನುಜನ ರಕ್ತ
ಕಲೆ ಏಕೆ?
ದೇವಾಧಿದೇವಾ||
ಈ ಭೂಮಿ ನಿನ್ನದು ನಾವೂನು ನಿನ್ನವರೇ
ಈ ಆಸ್ತಿ ಪಾಸ್ತಿಯ ಪ್ರಶ್ನೆ ಏನು?
ಈ ಕೊಲೆಯ ಪದ್ಧತಿ ಏನು ಹೇಳು
ಈ ಮಾಲೀಕತ್ವದ ಕತೆ ಏನು ಹೇಳು
ಈ ಭೂಮಿ ಚಟವು ಯಾರಿಗಿಹುದೋ
ಅವರಿಗೇಕೆ ಇಂಥ ನೀಚ ಬುದ್ಧಿ?
ದೇವಾಧಿದೇವಾ||
ಬಡ ತಾಯಿ ಜನಕೆ
ಒಳ್ಳೆ ಅಕ್ಕತಂಗಿಗೆ
ಕೊಡು ಮರ್ಯಾದೆ ಬಾಳು
ನೀ ಶಕ್ತಿ ಕೊಟ್ಟ ಈ ಜನಕೆ
ಕೊಡು ನೀ ಒಂಚೂರು ಬುದ್ಧಿ
ಈ ಜನಕೆ ಏಕೆ ಅಹಂಕಾರ ಬುದ್ಧಿ?
ಈ ಜನರ ಹೃದಯಕ್ಕೆ ಏಕೆ ತುಕ್ಕು ?
ದೇವಾಧಿದೇವಾ||
ಸಾವ ದಾರಿ ಹಿಡಿದ ಜನಕೆ
ಬದುಕಿ ಉಳಿವ ದಾರಿ ಹೇಳು
ಪಾಳು ಬೀಳದೆ ಇರಲಿ ಬಾಳು
ಕೊಡು ಜನಕೆ ನೀನು ಪ್ರೀತಿಯ ನೆರಳು
ಈ ಬಾಳಿನಲ್ಲಿ ಪ್ರೀತಿಯ ಬದಲು
ಬಿಲ್ಲು ಬಾಣಗಳ ಹಾರಾಟ ಏಕೆ
ದೇವಾಧಿದೇವಾ ನಿನ ಭೂಮಿ ಮೇಲೆ ಭೂಮಿಗಾಗಿ ಈ ಕದನ ಏಕೆ?
ಪ್ರತಿ ಸೋಲು ಗೆಲುವಿನ ಅಡಿಯಲ್ಲಿ ಮನುಜನ ರಕ್ತ
ಕಲೆ ಏಕೆ?
ದೇವಾಧಿದೇವಾ ||
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*
*ಸೃಜನಶೀಲತೆಯೆಂಬ ಅದ್ಭುತ ಕಲೆ*
ಪ್ರಲೋಭನೆ ಮತ್ತು ಪರಿಣಾಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!