ಈ ಪುಸ್ತಕವನ್ನು archive.net ತಾಣದಲ್ಲಿ ಇಳಿಸಿಕೊಂಡು ಓದಿದೆ . ಈ ಪುಸ್ತಕವು 141 ಪುಟ ಇದ್ದು ನಾಟಕವು 34ನೇ ಪುಟದಲ್ಲಿ ಆರಂಭವಾಗುತ್ತದೆ. ಇದರಲ್ಲಿ ನಾರದನು ಆರೋಗ್ಯದ ಪರವಾಗಿ ಆರೋಗ್ಯ ಪ್ರತಾಪ ಎಂಬ ಪಾತ್ರವಹಿಸಿದ್ದಾನೆ. ಈ ಪುಸ್ತಕದಲ್ಲಿ ಹೇಳುವುದು ಏನೆಂದರೆ ಮೋಕ್ಷ ಸಾಧನೆಯು ಜೀವನದ ಉದ್ದೇಶ . ಅದಕ್ಕೆ ಆರೋಗ್ಯ ಕಾಯ್ದುಕೊಬೇಕು. ಆರೋಗ್ಯವೆ ಭಾಗ್ಯ.

ದೇಹದ ವಿಷಯವ ತಿಳಿಯದ ಮನುಜ | ವಿದ್ಯೆಯು ಎಷ್ಟೇ ಇರಲಿ ಅವನು ಪಶುಸಮ ಎಂದು ಒಂದು ಹಾಡಿನಲ್ಲಿ ಹೇಳಲಾಗಿದೆ. .

ಯಾರೋ ಅನಾರೋಗ್ಯದ ಕುರಿತು ಹೇಳುತ್ತಾರೆ - ಪೂರ್ವಜನ್ಮದಲ್ಲಿ ಮಾಡಿದ ಕರ್ಮದ ಫಲ ಈ ಜನ್ಮದಲ್ಲಿ ಅನುಭವಿಸಲೇಬೇಕು. ಅದಕ್ಕೆ ಪ್ರತಿಯಾಗಿ ಇರುವ ಮಾತು--ಆ ಮಾತು ಆತ್ಮೋನ್ನತಿಯ ವಿಷಯದಲ್ಲಿ ಸರಿ ಇರಬಹುದು. ಶರೀರ ಧರ್ಮಶಾಸ್ತ್ರ ಪ್ರಕಾರ ಹಾಗಲ್ಲ ನೋಡಿ-ದೇಹ ಧರ್ಮಶಾಸ್ತ್ರಕ್ಕೆ ವಿರುದ್ದವಾಗಿ ನಡೆದುದರ ಫಲವನ್ನು ದೇಹವೇ ಅನುಭವಿಸಬೇಕು. ಇದೇ ಜನ್ಮದಲ್ಲಿ ಅನುಭವಿಸಲೇಬೇಕು. ರೋಗರುಜಿನಗಳೆಲ್ಲ ಬರುವುದು ಪೂರ್ವ ಜನ್ಮದ ಕರ್ಮಫಲದಿಂದಲ್ಲ. ಈ ಜನ್ಮದಲ್ಲೇ ನಾವು ಆರೋಗ್ಯ ಶಾಸ್ಮದ ನಿಯಮಕ್ಕೆ ವಿರುದ್ದ ಮಾಡಿದ ಯಾವುದೋ ಒಂದು ಕರ್ಮದ. ಫಲವಾಗಿ ನಮಗೆ ವ್ಯಾಧಿಗಳು ಬರುವವು. ನಿಮಗೆ ಜೀವದ ಮೇಲೆ ಅಷ್ಟೊಂದು ಆಶೆಯಿಲ್ಲದಿರಬಹುದು. ಆದರೆ ಪೇಚಾಡುವುದು, ನರಳುವುದು ಯಾರಿಗೆ ಬೇಕು?

ಹಾಡುಗಳಲ್ಲಿ ತಾಳ ಪಂಜಾಬಿ. ದಾದರ ತಾಳ.ಮದಲಾಸಿ (ಮದರಾಸಿ ?) ಮಟ್ಟ ರಾಗ-ಭೂಪಾಳಿ. ಎಂದೆಲ್ಲಾ ಕಾಣುತ್ತವೆ. ಏನೆಂದು ಗೊತ್ತಾಗಲಿಲ್ಲ.