ಪುಷ್ಯ ಬಹುಳ ಅಮಾವಾಸ್ಯೆ. ಜನವರಿ ೨೫, ೨೦೦೯ ಪುರಂದರದಾಸರ ಆರಾಧನೆಯ ದಿನ.

ಕಳೆದ ಆರು ತಿಂಗಳಲ್ಲಿ ಮೊದಲ್ಗೊಂಡ ___LINK_OPEN_href="http://haridasa.in" target="_blank" title="haridasa sampada"___ಹರಿದಾಸ.ಇನ್ ನಲ್ಲಿ ಈಗ ಸುಮಾರು ೨೬೦ ಕ್ಕೂ
ಹೆಚ್ಚಿನ ದೇವರನಾಮಗಳಿವೆ ಎನ್ನುವುದನ್ನು ನೋಡಿದರೆ, ಬಹಳ ಸಂತೋಷವಾಗುತ್ತೆ. ಪುರಂದರರ
ಲಭ್ಯವಿರುವ ರಚನೆಗಳು ೧೫೦೦ಕ್ಕಿಂತ ಹೆಚ್ಚಿಲ್ಲ ಅನ್ನುವುದನ್ನು ನೆನೆದಾಗ, ಈ ಬೆಳವಣಿಗೆ
ದೊಡ್ಡದೇ.

ಶ್ರೀಕಾಂತ ಮಿಶ್ರಿಕೋಟಿಯವರ ಜೊತೆ ಒಮ್ಮೆ ಮಾತಾಡುತ್ತಿದ್ದಾಗ ಈ ವರ್ಷದ ಆರಾಧನೆಯಯ
ಒಳಗೆ ೧೦೦ ರಚನೆಗಳನ್ನಾದರೂ ಹಾಕುವ ಉದ್ದೇಶವಿದೆ ಎಂದಿದ್ದರು - ಅದಕ್ಕೂ ಹೆಚ್ಚಿನ
ರಚನೆಗಳನ್ನು ಕಳೆದ ತಿಂಗಳಲ್ಲಿ ಸೇರಿಸಿದ್ದಾರೆ. ಹಾಗೇ ಇನ್ನೂ ಹಲವು ಆಸಕ್ತರು ಕೂಡ ಈ
ಪ್ರಯತ್ನದಲ್ಲಿ ಕೈಜೋಡಿಸಿದ್ದಾರೆ.

ಎಲ್ಲರಿಗೂ, ನನ್ನ ಧನ್ಯವಾದಗಳು! ಹೀಗೇ ಮುಂದಿನ ವರ್ಷದೊಳಗೆ ಪುರಂದರದಾಸರ ಉಳಿದ ಎಲ್ಲ ರಚನೆಗಳನ್ನೂ,
ಇತರ ದಾಸರ ರಚನೆಗಳನ್ನೂ ಹಾಕಲು ಇನ್ನೂ ಹೆಚ್ಚಿನ ಆಸಕ್ತರು ಮುಂದೆ ಬರುತ್ತಾರೆಂಬ ಆಸೆ,
ಬರುವರೆಂಬ ನಂಬಿಕೆ ನನ್ನದು.

-ಹಂಸಾನಂದಿ