ಆತ ಸುಂದರಿಯಾಗಿದ್ದ ಅವಳನ್ನು ಅತಿಯಾಗಿ ಪ್ರೀತಿಸತೊಡಗಿದ. ದಿನಗಟ್ಟಲೆ ಆಕೆಯ ಹಿಂದೆ ತಿರುಗಿ ಕೊನೆಗೊಂದು ದಿನ ಪ್ರೇಮ ನಿವೇದನೆ ಮಾಡಿಕೊಂಡ. ಆಕೆಗಾಗಿ ತಾನು ಪಟ್ಟ ಪಾಡನೆಲ್ಲಾ ಹೇಳಿಕೊಂಡ. ಆಕೆಯಿಲ್ಲದಿದ್ದರೆ ತನಗೆ ಬದುಕೇ ಇಲ್ಲ ಎಂದ. ಅವನ ಕಥೆಯೆಲ್ಲಾ ಕೇಳಿದ ಆಕೆ ಹೇಳಿದಳು "ನಿಮಗೆ ಸರಿಯಾದ ಜೋಡಿ ನನ್ನ ತಂಗಿ. ಆಕೆ ನನಗಿಂತಲೂ ಸುಂದರಿ. ನಿಮಗೂ ಆಕೆ ಇಷ್ಟವಾಗಬಹುದು. ಆಕೆ ಅಲ್ಲಿ ಬರುತ್ತಿದ್ದಾಳೆ ನೋಡಿ" ಎಂದಳು. ತಕ್ಷಣ ಆತ "ಹೌದಾ, ಎಲ್ಲಿ" ಎಂದು ತಿರುಗಿ ನೋಡಿದ. ಆಗ ಆಕೆ ಅವನ ಕಪಾಳಕ್ಕೆ ಬಾರಿಸಿ - "ನಿನ್ನ ಪ್ರೇಮ ಅಮರವಾದುದು ಎಂದೆ. ನನಗಿಂತಲೂ ಸುಂದರಿ......... ಅಂದಾಕ್ಷಾಣ ತಿರುಗಿಬಿಟ್ಟೆಯಾ?" ಎಂದು ಹೇಳಿ ಹೊರಟು ಹೋದಳು.
ನೀತಿ : ಪ್ರೀತಿಸುವ ಮುನ್ನ ಆಕೆಯ ಅಕ್ಕ ತಂಗಿಯರನ್ನು ನೋಡಿ ;);-)
ಪ್ರತಿಕ್ರಿಯೆ (4)