ನೀನು ನನಗೆ ಬೆನ್ನು ಹಾಕಿ ಕುಳಿತ ಕೂಡಲೆ
ನನಗೆ ನಿನ್ನ ಕಣ್ಣಂಚಿನ ಕಂಬನಿ ಕಾಣದೆಂದು ಮಾಡಿದೆಯಾ?
ನನ್ನಲ್ಲಿ ಹೇಳಲಾರದಂತಹ ನಿನ್ನ ಆ ನೋವೇನು?
ನಾ ನೋಡಲಾರೆ ಗೆಳೆಯ ನಿನ್ನ ಈ ಹತಾಷೆಯನು
ಕಳೆದುಕೊಳ್ಳಬೇಡ ಜೀವನದಲ್ಲಿ ಆಸಕ್ತಿಯನು
ನೋಡು ಬಾನಂಚಿನಲ್ಲಿ ಬೆಳ್ಳಿಯ ಕಿರಣ ಬರುವುದನು
ಮುಂಜಾವಿನ ಬೆಳಗಿನಲಿ ಹಕ್ಕಿಗಳ ನಗುವಿನಲಿ
ನಿನ್ನೆಲ್ಲಾ ದುಃಖವನು ಮರೆತು ನನ್ನೊಮ್ಮೆ ನೋಡು
ನೀನು ಕಳೆದುಕೊಂಡ ಆ ಕನಸುಗಳು,
ಮತ್ತೊಮ್ಮೆ ನಿನಗೆ ದೊರಕುವುದು ನೋಡು
ಪ್ರತಿಕ್ರಿಯೆ (5)