ನಗರದ ಬೀದಿಗಳಲಿ ಈಗ ಎಲ್ಲೆಂದರಲ್ಲಿ ಪಬ್ಬು ಪಬ್ಬು
ನಗರದ ಬೀದಿಗಳಲಿ ಈಗ ಎಲ್ಲೆಂದರಲ್ಲಿ ಪಬ್ಬು ಪಬ್ಬು
ಪಬ್ಬುಗಳ ಒಳಗೆಲ್ಲಾ ಸದಾಕಾಲ ಏನೋ ಗಬ್ಬು ಗಬ್ಬು

ಪಬ್ಬಿನ ಒಳಗೆ ಹೋದರೆ ಬೆಳಕು ಬರೇ ಮಬ್ಬು ಮಬ್ಬು
ಪಬ್ಬಿನ ಒಳಗೆ ಹೋದರೆ ಬೆಳಕು ಬರೇ ಮಬ್ಬು ಮಬ್ಬು
ಅಮಲೇರಿದ ನಂತರ ಹೇಳುತ್ತಾರೆ ಬಾ ನೀ ನನ್ನ ತಬ್ಬು

ಮಬ್ಬಿನಲ್ಲಿ ತಬ್ಬಿಕೊಂಡು ಕುಣಿದವರು ಯಾರಾದರೇನು
ಮಬ್ಬಿನಲ್ಲಿ ತಬ್ಬಿಕೊಂಡು ಕುಣಿದವರು ಯಾರಾದರೇನು
ಮಬ್ಬಿನಲ್ಲೇ ಅಲ್ಲಿಂದ ಜಾಗ ಕಾಲಿ ಮಾಡಬೇಕು ನೀನು

ಬೆಳಕು ಹರಿದು ನಿಜವರಿತಾಗ ಎಲ್ಲರೂ ಅಲ್ಲಿ ತಬ್ಬಿಬ್ಬು
ಬೆಳಕು ಹರಿದು ನಿಜವರಿತಾಗ ಎಲ್ಲರೂ ಅಲ್ಲಿ ತಬ್ಬಿಬ್ಬು
ಮಬ್ಬಲ್ಲಿ ಅನ್ನಬಾರದವರಿಗೆ ಅಂದಿದ್ದ ಬಾ ನನ್ನ ತಬ್ಬು
*****************************