ಬಾಯಿಲ್ಲದವರು ನಾವು
ನಮ್ಮೆದುರಿಗೆ ಏನು ನಡೆಯುತ್ತಿದ್ದರೂ
ನೋಡದಂತೆ ಸುಮ್ಮನಿರುವೆವು
ನಮ್ಮ ಮೇಲೇ ದೌರ್ಜನ್ಯನಡೆಯುತ್ತಿದ್ದರೂ
ತಾಳ್ಮೆ ಗೆಡುವುದಿಲ್ಲ
ನಮಗೂ ಭಾವನೆಗಳಿವೆ
ಎಲ್ಲವನ್ನೂ ನಮ್ಮೋಳಗೇ ಹೇಳಿಕೊಳ್ಳುವೆವು
ಗಟ್ಟಿಯಾಗಿ ಮಾತನಾಡಲಾರೆವು
ಇದಕ್ಕೇ ದುರ್ಬಲರೆಂಬ ಹಣೆ ಪಟ್ಟಿ ನಮಗೆ
ಏಕೆಂದರೆ ಬಾಯಿಲ್ಲದವರುನಾವು
ಯಾರಾದರೂ ನಮ್ಮ ಭಾವನೆಗಳಿಗೆ
ದನಿಯೆತ್ತಿದರೆ
ಸಂತೋಷಿಸುವೆವು
ಈಗಿನ ಸ್ಪರ್ಧಾಯುಗದಲ್ಲಿ
ನಾವಂತೂ ಸ್ವತಃ ಏನೂ ಮಾಡುವುದಿಲ್ಲ
ಏಕೆಂದರೆ ಬಾಯಿಲ್ಲದವರುನಾವು
ಯಾರೂ ನಮ್ಮೊಳಗಿನ ದನಿಯಾಗದಿದ್ದರೆ
ನಾವಾಡುವ ಮಾತಾಗದಿದ್ದರೆ
ಈ ದೌರ್ಜನ್ಯ ದುರಾಚಾರಗಳನಡುವೆ
ಬಹಳದಿನ ಬದುಕುವುದಿಲ್ಲನಾವು
ಏಕೆಂದರೆ ಬಾಯಿಲ್ಲದವರುನಾವು
ಸೀತ
ಪ್ರತಿಕ್ರಿಯೆ (7)