ಅಭಿವೃದ್ಧಿ ಹೊಂದುತ್ತಿರುವ / ಹೊಂದಿರುವ ರಾಷ್ಟ್ರದಲ್ಲಿ ನಾವುಗಳು ಬದುಕುತ್ತಿದ್ದೇವೆ. ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ಹಂತದಿಂದ ಮೊದಲನೇ ಹಂತಕ್ಕೆ ಸಾಗುತ್ತಿರುವ ರಾಷ್ಟ್ರ ನಮ್ಮದು ಅಂತಹ ಪರಿಸ್ಥಿತಿಯಲ್ಲಿ ನಾವುಗಳು ಇದ್ದೇವೆ. ಇಂತಹ ಭಾರತದಲ್ಲಿ 20 ನೇ ಶತಮಾನದಲ್ಲಿ ನಿರುದ್ಯೋಗಕ್ಕಿಂತ ಸೋಮಾರಿಗಳನ್ನು ಮತ್ತು ಮೈಗಳ್ಳ ರನ್ನು ಹೊರತು ಪಡಿಸಿ ಉಳಿದೆಲ್ಲರೂ ಸ್ವಂತ ಕಸುಬು, ಕೃಷಿ, ಕೂಲಿ, ಹೀಗೆ ಹಲವಾರು ರೀತಿಯಲ್ಲಿ ನೆಮ್ಮದಿಯಾಗಿ ಇನ್ನೊಬ್ಬರ ಕೈ ಕೆಳಗೆ ಕಾರ್ಯ ನಿರ್ವಹಿಸುವಂತಹ ಪರಿಸ್ಥಿತಿ ಅಂದು ಕಾಣಬಹುದಿತ್ತು. ಅಂದು ಸೋಮಾರಿಗಳಿಗೂ ಕೆಲಸಕೊಟ್ಟು ದುಡಿಸಿಕೊಳ್ಳುವ ಸಮಯ ಎಂದರೆ ತಪ್ಪಾಗಲಾರದು. ಅಂದು ಕೆಲವೇ ವರ್ಗದ ಕೈಲಿ ಅಧಿಕಾರ ಇತ್ತು ಅವರುಗಳು ಹಿಡಿತ ವರತುಪಡಿಸಿದರೆ ನೆಮ್ಮದಿಯಾಗಿ ಜೀವಿಸಬಹುದಿತ್ತು.
ಬ್ರಿಟಿಷರು ಆಗಮನದಿಂದ ಅಧಿಕಾರ ವರ್ಗದ ಹಿಡಿತ ತಪ್ಪಿ ಗುಲಾಮರಾಗಿ ದುಡಿಸಿಕೊಳ್ಳಲು ನಮ್ಮವರೇ ಬ್ರಿಟಿಷರಿಗೆ ಅವಕಾಶ ಮಾಡಿಕೊಡಲಾಯಿತು ಎಂದರೆ ತಪ್ಪಾಗಲಾರದು. ದಿನ ಕಳೆದಂತೆ ( ನಾಗಮೋಹನ್ ದಾಸ್ ರವರ ಸಂವಿಧಾನ ಓದು ಪುಸ್ತಕದಲ್ಲಿ ತಿಳಿಸಿರುವಂತೆ ) ಬ್ರಿಟಿಷ್ರು ಮತ್ತು ಇತರೆ ವಸಾಹತುಶಾಹಿಗಳು ಭಾರತದಲ್ಲೇ ಸುದೀರ್ಘವಾಗಿ ನೆಲೆಸಿದರು ನಮ್ಮ ಬಲ ಹೀನಾರ ಸಂಪರ್ಕ ದಿಂದ ಹುಟ್ಟಿದ ಸಮಿಶ್ರ ಜನಸಂಖ್ಯೆ ಹುಟ್ಟಿಕೊಂಡಿತು ಅವರು ಕೂಡ ಭಾರತೀಯರಗಿ ಬೆರೆತು ಹೋದರು.
ವಿವಿದ ವಸಾತುಶಾಹಿಗಳಿಂದ ಭಾರತದಲ್ಲಿನ ಕೈಲಿ ಕಸುಬುಗಳ ಹಿಡಿತ ತಪ್ಪಿಸಿ ಅವರ ಕುಶಲತೆಯನ್ನು ಯಂತ್ರಗಳ ಮೂಲಕ ಉತ್ಪಾ ದನೆ ಅಭಿರುದ್ದಿ ಪಡಿಸಿದರು ಆ ಸಂದರ್ಭದಲ್ಲಿ ಭಾರತೀಯರ ಮೂಲ ಕಸುಬುಗಳ ಮೇಲೆ ಪರಿಣಾಮ ಬೀರಿ ಕಡಿಮೆ ವೇತನ ಹೆಚ್ಚು ದುಡಿಮೆ ಕಾರಣವಾಗಿ ಭಾರತದಲ್ಲಿ ಆವಾಗಿನಿಂದಲೇ ನಿರುದ್ಯೋಗ ಉಂಟಗಳು ಕಾರಣಗಲಾದವು ಎಂಬುದು ನಾವು ಗಮನಿಸಬೇಕಾದ ಸಂಗತಿ.
ಪ್ರಸ್ತುತ ದಿನ ಮಾನಗಳಲ್ಲಿ ಎಲ್ಲಾ ರಂಗದಲ್ಲೂ ನಾವುಗಳು ನಮ್ಮವರೇ ಅದ ಆಧುನಿಕವಾಗಿ ಭಾರತೀಯರಿಂದಲೇ ಹೊಸತುವಾದ ಉಂಟಾಗಿರುವುದು ನಾವು ಕಾಣಬಹುದಾಗಿದೆ. 21 ನೇ ಶತಮಾನದ ಕಾಲಘಟ್ಟ ವಾದ ಇಂದು ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದುವ ದೇಶವಾಗಿದ್ದು ಎಷ್ಟು ಉದ್ಯೋಗ ಸೃಷ್ಟಿಗೆ ಕ್ರಮ ಜರುಗಿದೆ ಎಂಬುವ ಚಿಂತನೆ ಮಾಡಬೇಕಿದೆ.
ಸ್ವತಂತ್ರ ಬಂದು ಸುಮಾರು ವರ್ಷಗಳೇ ಕಳೆದಿವೆ ಆದರೆ ಯುವಕರಿಗೆ ಒಂದು ಉದ್ಯೋಗ ಕೊಡುವಲ್ಲಿ ಸರ್ಕಾರಗಳು ಹಿಂದೆ ಸರಿಯುತ್ತಿವೆ. ದೇಶದ ಪ್ರತಿಯೊಬ್ಬ ನಿರುದ್ಯೋಗಿಯೂ ದಿನಾಂಪ್ರತಿ ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಕಟ್ಟುತ್ತಾನೆ ಆ ತೆರಿಗೆಯಿಂದ ಜೀವಿರುವ ರಾಜಕೀಯ ರಾಜಕಾರಣಿಗಳು ಮಾಡುವುದಾದರು ಏನು? ಮಾಡುತ್ತಿರುವುದಾದರು ಏನು?
ಪ್ರಸ್ತುತ ಕಾರ್ಯಾಂಗ ವ್ಯವಸ್ಥೆ ಹಾಳಾಗಿದೆ.
ಮೊನ್ನೆ ಯಾವುದೊ ಒಂದು ಕನ್ನಡದ ವಾರ್ತೆಯನ್ನು ಕೇಳುತ್ತಿರುವಾಗ ಹೇಳುತ್ತಿದ್ದರು ಮಾತು ಇಂದು ಸರ್ಕಾರಿ ಉನ್ನತ ಹುದ್ದೆಯಲ್ಲಿ ಇರುವ ಪ್ರತಿಯೊಬ್ಬರೂ ಭ್ರಷ್ಟಾಚಾರ ಮಾಡಿರುವವರೇ ಇಲ್ಲ ಮಾಡುವಂತೆ ಸಹಕಾರ ನೀಡುತ್ತಿರುವವರೇ ಎಂದು ಹೇಳಲಾಗುತ್ತಿತ್ತು ಆಗ ಆ ಮಾತು ನಂಕ್ಗೆ ನಿಜ ಎನ್ನಿಸಿತು. ದಿನಾಂಪ್ರತಿ ನಿವೃತ್ತಿ ಹೊಂಡುತ್ತಿರುವ ಅಧಿಕಾರಿಗಳ ಮದ್ಯೆ ಇರುವ ಅಧಿಕಾರಿಗಳ ಮೇಲೆ ಒತ್ತಡದ ಕೆಲಸ ನಿರ್ವಹಿಸುತ್ತಿರುವುದು ಕಾಣಬಹುದು. ಎಷ್ಟೇ ನಿಷ್ಠಾವಂತ ಅಧಿಕಾರಿಯಾಗಿದ್ದರು ಭ್ರಷ್ಟ ರಾಜಕಾರಣಿಗಳ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಆದ್ದರಿಂದ ಅಂತಹ ರಾಜಕಾರಣಿಗಳ ಆಯ್ಕೆ ನಮ್ಮ ಕೈಯಲ್ಲೇ ಇರುವುದರಿಂದ ಆ ಎಲ್ಲಾ ಸಮಸ್ಯೆಗಳನ್ನು ನೀವಾರಿಸುವ ಪರಿಹಾರಗಳನ್ನು ಕಂದುಕೊಳ್ಳುವ ಹಕ್ಕು ನಮ್ಮಲ್ಲೇ ಇದೆ.
ಕೇವಲ ವಿದೇಶಿ ಕಂಪನಿಗಳಿಂದ ಉದ್ಯೋಗ ನೀಡುವುದು ಅಷ್ಟಕಷ್ಟೆ ಅಲ್ಲಿ ನುರಿತರಿಗಷ್ಟೇ ಉದ್ಯೋಗ. ಸರ್ಕಾರದಲ್ಲಿ ರಾಜಕೀಯ ಪಕ್ಷಗಳ ಅನುನಾಯಿಗಳಿಗೆ ಇಲ್ಲವೇ ಸಿರಿವಂತರಿಗಷ್ಟೇ ಎಂಬಂತಾಗಿದೆ. ನಮ್ಮಲ್ಲೇ ಇರುವ ಕೃಷಿ ಮತ್ತು ಕೈ ಕಸುಬು ಉದ್ಯೋಗ ಎಷ್ಟು ಅರೋಗ್ಯಕರವಾಗಿದೆ ಎಂದರೆ ಎಲ್ಲಾ ರೀತಿಯಲ್ಲೂ ಶ್ರೇಷ್ಠ ಎಂದು ಭಾವಿಸಬಹುದು. ಸರ್ಕಾರ ಮಾಡಬೇಕಿರುವ ಅಂಶ ಏನೆಂದರೆ ರೈತರಿಗೆ ಉತ್ತಮವಾದ ಬೆಲೆ ಹಾಗೂ ಅವರ ಬೆಳೆಗಳಿಗೆ ಮೂಲ ಭೂತ ಸೌಲಭ್ಯ ಒದಗಿಸಿದರೆ ಅಷ್ಟೇ ಎಲ್ಲಾ ವರ್ಗದ ಜನರಿಗೆ ಅನ್ನ ಹಾಕುವ ಶಕ್ತಿ ರೈತನಲ್ಲಿದೆ. ಇಂದು ವಿದೇಶಿ ಆಹಾರ ವ್ಯೆವಸ್ತೆಯಿಂದ ಅರೋಗ್ಯ ಏರುಪೇರು ಕಾಣಬಹುದು. ಮನುಷ್ಯನಿಗೆ ವಾಣಿಜ್ಯ ಬೆಳೆಗಳಿಗಿಂತ ಜನತೆಗೆ ಅನ್ನ ಹಾಕುವ ಬೆಳೆಯುವ ರೈತನ ಸಹಕಾರಕ್ಕೆ ನಿಲ್ಲಬೇಕು.
ಇಲ್ಲಿ ರಾಜಕಾರಣಿಗಳಿಗೆ / ಸರ್ಕಾರಗಳಿಗೆ ದೇಣಿಗೆ ನೀಡುವ ವಿದೇಶಿ ಕಂಪನಿಗಳೇ ಶ್ರೇಷ್ಠ ವಾಗಿವೆ. ಪ್ರಸ್ತುತ ದಿನಮಾನಗಳಲ್ಲಿ ಆಹಾರದಲ್ಲಿ ಗುಣಮಟ್ಟ ಕಡಿಮೆಯಾಗಿದೆ ಮುಂದೊಂದು ದಿನ ರೈತರನ್ನು ಹುಡಿಕಿ ಅನ್ನ ಬೇಡುವ ಕಾಲ ದೂರವಿಲ್ಲ.
ವಿಪರ್ಯಾಸ ಏನೆಂದರೆ ಉಳುಮೆಗೆ ಯೋಗ್ಯವಾದ ಅವರ ಭೂಮಿ ಕೂಡ ಕಸಿದುಕೊಂಡು ನಿರುದ್ಯೋಗಿಯಾಗಿ ಮಾಡುತ್ತಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!