ಭಾರತ ಎಂಬುದು ಪ್ರಪಂಚದ ಅತ್ಯಂತ ಬಲಿಷ್ಠವಾದ ರಾಷ್ಟ್ರ ಎಂದರೆ ತಪ್ಪಾಗಲಾರದು. ಬ್ರಿಟಿಷರು, ಫ್ರೆಂಚರು, ಡಚ್ಚರು ಭಾರತೀಯರನ್ನು ಹೀನಾಯವಾಗಿ ದುಡಿಸಿಕೊಳ್ಳಲಾಗುತ್ತಿದ್ದ ಕಾಲವೊಂದಿತ್ತು. ಅದೇ ರೀತಿಯ ಪರಿಸ್ಥಿತಿ ಇಂದು ಭಾರತೀಯರು ಭಾರತದವರನ್ನು ಹೀನಾಯವಾಗಿ ಕಾಣುತ್ತಿರುವುದು ನಾವುಗಳು ಕಾಣಬಹುದು. ಅದು ಹೇಗೆ ಎಂದರೆ ಭಾರತದ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಉದ್ಯೋಗ ನೇಮಕಾತಿ ನಡೆಯುತ್ತಿಲ್ಲ ,ಬದಲಾಗಿ ಖಾಲಿ ಹುದ್ದೆಗಳು ಪ್ರತಿಶತ ಎಲ್ಲಾ ಹುದ್ದೆಗಳು ಖಾಲಿಯಾಗುವ ಹಂತದಲ್ಲಿ ಇರುವುದನ್ನು ನಾವು ಕಾಣಬಹುದು. ಆದರೆ ಬ್ರಿಟಿಷ್ ಈಸ್ಟ್ ಇಂಡಿಯಾ ಈ ಕಂಪನಿ ಭಾರತದ ವಸಹತು ಶಾಯಿ ಏನೆಲ್ಲಾ ಮಾಡಲು ಸಾಧ್ಯವಾಗಿದೆಯೋ ಅದೆಲ್ಲವನ್ನು ಅಂದು ಮಾಡಿರುವುದು ನಾವು ಕಾಣಬಹುದು. ಪ್ರಸ್ತುತ ದಿನಮಾನಗಳಲ್ಲಿ ಅದೇ ರೀತಿಯ ಬಲಿಷ್ಠರ ವಸಾಹತು ವಾದ ನಾವು ಕಾಣಬಹುದಾಗಿದೆ.

ರಾಜಕೀಯವಾಗಿ ಪರಿಗಣಿಸುವುದಾದರೆ : ಯಾವುದೇ ಪಕ್ಷ ಪ್ರಾರಂಭದಲ್ಲಿ ಸಾಮಾಜಿಕ ಬದ್ದತೆ ಹಾಗೂ ಸಾಮಾಜಿಕ ಹೊಣೆಗಾರಿಕೆ, ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುವುದು ಕಾಣಬಹುದು. ಆ ಪಕ್ಷ ಒಂದು ಬಾರಿ ಅಧಿಕಾರಕ್ಕೆ ಬಂತು ಎಂದರೆ ಸಾಕು ನಾನು ನನ್ನ ಕುಟುಂಬ, ಕುಟುಂಬ ರಾಜಕೀಯ, ಈ ರೀತಿಯಾಗಿ ಕುಟುಂಬದ ಸ್ವಾರ್ಥ ರಾಜಕೀಯವಾಗಿ ಬದಲಾಗುತ್ತವೆ. ನಾವು ಹಲವು ರಾಜ್ಯಗಳಲ್ಲಿ ಗಮನಿಸಬಹುದು ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಇತರೆ ರಾಜ್ಯಗಳಲ್ಲಿ ನೋಡಬಹುದು. ಪ್ರಸ್ತುತ ಕೇವಲ ಕೆಲವೇ ಕೆಲವು ಜನರು ಸಿರಿವಂತರು ಅದು ರಾಜಕೀಯ ಮತ್ತು ಬಹುಕಂಪನಿ ಒಡೆಯರ ಬಳಿ ಇರುವುದು ನಾವು ಕಾಣಾಬಹುದು. ಇದಕ್ಕೆಲ್ಲ ಕಾರಣ ನಾವುಗಳು ಪ್ರಜ್ಞಾ ಹೀನರಾಗಿರುವುದು. ಪ್ರತಿಯೊಂದು ವಿಷಯವನ್ನು ಪ್ರಶ್ನೆ ಮಾಡದೇ ಇರುವುದು ಇದಕ್ಕೆಲ್ಲ ಕಾರಣ.

ರಾಜಕಾರಣದಿಂದ ಹೇಗೆ ನಾವು ವಸಹತುಶಾಹಿಗೆ ಒಳಗಾಗುತ್ತಿರುವುದು : ದೇಶ ರಾಜಕಾರಣದಲ್ಲಿ ಪ್ರತಿಶತ ಉದ್ಯೋಗ ಕೊಡುವಲ್ಲಿ ವಿಪಲವಾಗುತ್ತಿರುವುದು. ಯಾವುದೇ ಒಂದು ಪಕ್ಷ / ವ್ಯಕ್ತಿ ಬಹಳಷ್ಟು ಆಶ್ವಾಸನೆ ನೀಡುತ್ತಾನೆ. ಆ ಭಾಗದ ಜನರಲ್ಲಿ ಒಳ್ಳೆ ಮನೋಭಾವ ಮೂಡುವ ಹಾಗೆ ನಟಿಸುತ್ತಾನೆ. ಆ ನಟನೆಯ ಜೊತೆಗೆ ಕೋಟಿ ಕೋಟಿ ಹಣವನ್ನು ಹಂಚುತ್ತಾನೆ ಹಾಗೂ ನಾಗರಿಕರನ್ನು ಕೊಂಡು ಕೊಳ್ಳುತ್ತಾನೆ ಜೊತೆಗೆ ಹಣದ ದಾಹ ಇರುವ ವ್ಯಕ್ತಿಗಳನ್ನು ತನ್ನತ್ತ ಸೆಳೆಯುತ್ತಾನೆ. ಈ ಮೂಲಕ ರಾಜಕೀಯ ಹಿಡಿತ ಸಾಧಿಸುವಲ್ಲಿ ಸಫಲನಾಗುತ್ತಾನೆ. 5 ವರ್ಷಗಳ ಕಾಲ ತನಗೆ ಎದುರಾಗುವ ಸಮಸ್ಯೆಗಳ ಕುರಿತು ಕಾಯಿದೆಗಳನ್ನು ತರುತ್ತಾನೆ. ಅವರ ಅಧಿಕಾರ ಜನರ ಕಲ್ಯಾಣಕ್ಕೆ ಮೀಸಲಾಗಬೇಕಿದ್ದ ಅಧಿಕಾರ ಅವನ ರಾಜಕೀಯದ ಅನುಕೂಲಕ್ಕೆ ಅನುಗುಣವಾಗಿ ಮಾಡಿಕೊಳ್ಳುತ್ತಾನೆ. ಅಲ್ಲಿ ಪ್ರಶ್ನೆ ಮಾಡುವವರ ವಿರುದ್ಧ ಕಾನೂನು ಕತ್ತಲೆಗಳ ಅಡ್ಡ ಗೋಡೆಗಳನ್ನು ನಿಲ್ಲಿಸುತ್ತಾನೆ. ಆ ಮೂಲಕ ಅಧಿಕಾರ ಚಲಾಯಿಸುತ್ತಾನೆ. ತನ್ನ ಅಧಿಕಾರವನ್ನು ಜನರ ಕಲ್ಯಾಣಕ್ಕೆ ಬಳಸದೆ ಜನರಿಂದ ತನಗಾವುದೇ ಅಡಚಣೆ ಆಗಬಾರದು ಎಂಬುದಾಗಿ ಆಡಳಿತ ನಡೆಸಲು ಮುಂದಾಗುತ್ತಾನೆ.......

ಮುಂದುವರೆಯುವುದು ಈ ಲೇಖನ..........