ವಿಷಯವಿಲ್ಲವೆಂದೆನ ಬೇಡಿ ಸ್ವಾಮಿ, ವಿಷಯಗಳು ಸಾಕಷ್ಟಿವೆ
ನಿಮ್ಮ ಕಾರ್ಯಬಾಹುಳ್ಯದಿಂದ ಈಗ ಪುರುಸೊತ್ತಿಲ್ಲದಿರಬಹುದು

ಕೆಲಸವೆಷ್ಟೇ ಇದ್ದರೂ ಬರೆಯಬೇಕೆಂದಾಗ ಬರೆದೇ ಬರೆಯುವಿರಿ
ಹವ್ಯಾಸಗಳೇ ಹಾಗೆ ಸ್ವಾಮಿ, ನಮ್ಮನ್ನರಿವಿಲ್ಲದೇ ಬಂಧಿಸಬಹುದು

ಕೈಯಲ್ಲಿ ಕಾಸಿಲ್ಲದಿದ್ದರೂ ಕುಡುಕ ಕುಡಿಯದೇ ಉಳಿಯಲಾರ
ಬರೆಯುವ ಗೀಳು ಅಂಟಿಸಿಕೊಂಡವ ಬರೆಯದೇ ಇರಲಾರ

ಬರೀ ಬರೆಯುವುದಕ್ಕಾಗಿ ಎಂದಿಗೂ ನೀವು ಬರೆಯದಿರಿ
ಬರೆಯಬೇಕೆಂದೆನಿಸಿದಾಗ ನಿದ್ದೆ ಬಿಟ್ಟಾದರೂ ಬರೆಯಿರಿ.

ನಮಗೆ ಬರೆಯುವ ವ್ಯಕ್ತಿ ಮುಖ್ಯ ಅಲ್ಲ, ಆತನ ಬರಹ ಮುಖ್ಯ.
ನನ್ನ ಮಾತು ಕಟುವಾಗಿ ಕಂಡರೂ ಇದು ನೂರಕೆ ನೂರು ಸತ್ಯ
*********************************