ಇಂದೇಕೋ ನನ್ನೀ
ಮನಸ್ಸು ಮರ್ಕಟನಂತೆ
ನಿಂತಲ್ಲೇ ನಿಲದಂತೆ
ಮಾತೊಂದ ಕೇಳದಂತೆ
ನಾ ಆಶ್ಚರ್ಯ ಪಡುವಂತಹ
ನನ್ನದೇ ನಡವಳಿಕೆಗಳು
ಈ ಮುಂಜಾವಿನಿಂದಲೂ
ವಿಚಿತ್ರಾವಿಚಿತ್ರ ಭಾವಗಳು
ವಾರ್ತೆ ಕೇಳುವಾಗ ನೃತ್ಯ
ಮಾಡಿ ಬೈಸಿಕೊಂಡೆ
ಯಾವುದೋ ಹಾಡಿಗೆ ದೊಡ್ಡ
ದನಿಯಾಗಿ ಕಿರುಚಿಕೊಂಡೆ
ರಸ್ತೆಯಲಿ ವಾಹನಕ್ಕಡ್ದ
ಬಂದವನ ಬೈದಿದ್ದಾಯ್ತು
ಯಾರನ್ನೋ ನೆನೆಸಿಕೊಂಡು
ಒಳಗೊಳಗೇ ನಕ್ಕಿದ್ದಾಯ್ತು
ಅಪದ್ಧ ಸಂದೇಶಗಳ ಕಳುಹಿಸಿ
ಗೆಳೆಯರ ಚಕಿತಗೊಳಿಸಿದೆ
ಅಪರೂಪಕ್ಕೆ ಕರೆಮಾಡಿ
ಮರೆತವರ ವಿಚಾರಿಸಿದೆ
ಕೈಯಲ್ಲಿದ್ದ ಕೆಲಸವನ್ನೆಲ್ಲಾ
ಪಟಪಟನೇ ಮಾಡಿ ಮುಗಿಸಿದೆ
ನನ್ನ ಚಿತ್ರವನು ತೆಗೆದು
ಮರ್ಕಟನ ಚಿತ್ರ ಹಾಕಿ ಸುಖಿಸಿದೆ.
ಪ್ರತಿಕ್ರಿಯೆ (4)