ಕಪ್ಪು ಮತ್ತು ಬಿಳುಪು

ಕಪ್ಪಾಗಿಯೇ ನಾನು ಜನಿಸಿದೆ
ಕಪ್ಪಾಗಿಯೆ ನಾನು ಬೆಳೆದೆ
ಉರಿವ ಬಿಸಿಲಲೂ ನಾನು ಕಪ್ಪಾಗಿಯೇ ಹೊಳೆವೆ!

ಭಯ-ಭೀತನಾದಾಗ ಬದಲಾಗದ ಬಣ್ಣ
ನರಳುತ್ತ ಮಲಗಿದರೂ ನಾನು ಕಪ್ಪಗಿಯೇ ಇರುವೆ

ಮತ್ತೆ ನೀವು?

ಬಿಳಿಯರೇ ಇಲ್ಲಿ ಕೇಳಿ,...
ಬೆಳೆಯುವಾಗ ಮಾತ್ರ ನೀವು ಬಿಳಿಯರು
ಬಿರುಬಿಸಿಲಿಗೆ ಕೆಂಪಾಗಿ ಬಿಡುವಿರಿ
ಕಡುತಂಪಿನಲಿ ನೀಲಿಯಾದರೆ ನೀವು
ಆರೋಗ್ಯ ಹದಗೆಟ್ಟು ಹಸಿರಾಗುವಿರಿ
ಸತ್ತು ಮಲಗಿದ ಮೇಲೆ ಬಣ್ಣ ಬೂದಿ ಬೂದಿ

ಮತ್ತೆ?....

ನನ್ನನ್ನು ಮಾತ್ರ ಕರೆಯುವಿರಿ
"ವರ್ಣೀಯ.. ವರ್ಣೀಯ" ನೆಂದು!!

ಸಂಗ್ರಹ : "ಹಾಯ್ ಬೆಂಗಳೂರು" ನಲ್ಲಿ ಪ್ರಕಟಗೊಂಡಿತ್ತು