ತುಂಬಾ ದಿನದ ಹಿಂದೆ 'ನನ್ನವಳು' ಇನ್ನುವ ಕವನವನ್ನು ನನ್ನ ಸ್ನೇಹಿತರೊಬ್ಬರು ಮೇಲ್ ಮಾಡಿದ್ದರು ಅದನ್ನೆ ಸ್ವಲ್ಪ ಬದಲಾಯಿಸಿ ಮೊದಲ ಸಲ ಬರೆಯುವ ಪ್ರಯತ್ನ ಮಾಡಿದ್ದೇನೆ. ಬರೆಯುವಲ್ಲಿ ಎಲ್ಲದರೂ ಎಡವಿದ್ದರೆ ಕ್ಷಮಿಸಿ.
ನನ್ನವನು
ನನ್ನವನು ಆಕಾಶದಲ್ಲಿನ ಸೂರ್ಯನಾಗಿರಬೇಕಿಲ್ಲ
ನನ್ನ ಹಣೆಯ ಕುಂಕುಮವಾಗಿದ್ದರೆ ಸಾಕು!
ನನ್ನವನಿಗೆ ಕಾರು, ಬಂಗಲೆ ಇರಬೇಕೆಂದೇನಿಲ್ಲ
ಬಾಳಿನುದ್ದಕ್ಕೂ ನನ್ನ ಕೈ ಹಿಡಿದು ನಡೆದರೆ ಸಾಕು!
ನನ್ನವನು ಇಂದ್ರನಂತೆ ರಸಿಕನಾಗಿರಬೇಕಿಲ್ಲ
ಹಿತವಾದ ಸ್ಪರ್ಶದಿ ತೋಳಿನಲಿ ನನ್ನ ಬಳಸಿದರೆ ಸಾಕು!
ನನ್ನವನು ಸದಾ ನನ್ನ ಹಿಂದೆ ಸುತ್ತಬೇಕೆಂದೇನಿಲ್ಲ
ನಾ ಮುನಿದಾಗ ಬಳಿ ಬಂದು ಪ್ರೀತಿಯಿಂದ ಲಲ್ಲೆಗರೆದರೆ ಸಾಕು!
ನನ್ನವನು ನನಗಾಗಿ ಚಿನ್ನ, ಬೆಳ್ಳಿ ತರಬೇಕೆಂದೇನಿಲ್ಲ
ನಾ ಸಾಕು ಎನ್ನುವವರೆಗೂ ಪ್ರೀತಿ ಇತ್ತರೆ ಸಾಕು!
---ಶೋಭ ಆರಾಧ್ಯಾ
ಪ್ರತಿಕ್ರಿಯೆ (2)