ಸಂಪದ ಸ್ನೇಹ ಮಿಲನ ದ ಬಗ್ಗೆ ಸಾಕಷ್ಟು ಓದಿದೆ...
ಆದ್ರೆ ಯಾರೂ ಯಾವ ನಿರ್ಧಾರಕ್ಕೆ ಬಂದ ಹಾಗೆ ಕಾಣಲಿಲ್ಲ..
ಸರಿ ಈಗಲಾದರು ನಿರ್ಧಾರ ಮಾಡಿ
ಬಂದು ಬಿಡಿ ನಮ್ಮೂರಿಗೆ..
ಮೇ ೧೦ನೇ ತಾರೀಖು ಆಗಬಹುದಾ???
ಮೇ ೧೦ ಭಾನುವಾರ....
ಸಂಜೆ ಮಂಡ್ಯದಲ್ಲಿ ಒಂದು ಒಳ್ಳೆಯ ಕಾರ್ಯಕ್ರಮವೂ ಇದೆ...
ಮಂಡ್ಯದ ಹೆಸರಾಂತ ನೃತ್ಯ ಸಂಸ್ಥೆ ಗುರುದೇವ ಲಲಿತ ಕಲಾ ಅಕಾಡೆಮಿ ಯಿಂದ ಬಸವಣ್ಣನವರ ಬಗ್ಗೆ ೧.೩೦ ಘಂಟೆ ಕಾಲ ಬ್ಯಾಲೆ ಇದೆ...
ನಿಮ್ಮ ಉತ್ತಗಳಿಗೆ ಕಾಯ್ತಾ ಇರ್ತೀನಿ...

ಮಂಡ್ಯ ತುಂಬಾ ದೂರ ಏನಿಲ್ಲ..
ಬೆಂಗಳೂರಿನ ಹಾಗೆ ಟ್ರಾಫಿಕ್ ಕಿರಿಕಿರಿ ಇಲ್ಲ ಅಡ್ರೆಸ್ ಹುಡುಕೋ ಗೋಳಿಲ್ಲ..
ತಂಪಾದ ಜಾಗ..
ದಯವಿಟ್ಟು ಮನಸು ಮಾಡಿ...

ನನ್ನಿ
ದೃಶ್ಯ ಪ್ರದೀಪ :)