' ಶರ್ತ್' ಚಿತ್ರದ 'ದೇಖೋ ಓ ಚಾಂದ್ ಛುಪಕೆ ' ಹಾಡಿನ ಪೂರ್ತಿ ಅನುವಾದ ಇಗೋ ಇಲ್ಲಿದೆ . ಇದು ಎಂದಿನಂತೆ ಮೂಲದ ದಾಟಿಯಲ್ಲಿ ಇದೆ. ಇದು 110ನೇ ಪೂರ್ಣ ಅನುವಾದ. ಒಟ್ಟು 59 3ನೇ ಅನುವಾದ .
ನೋಡು ಆ ಚಂದಿರ ಮೌನದಿ
ಮಾಡಿಹ ಏನೋ ಸೂಚನೆ
ಬಹುಶಃ ಹೇಳುತ ಇರುವ
ನಾ ಆದೆ ನಿನ್ನವಳು
ಆದೆ ನಿನ್ನವಳು
ನಾ ಆದೆ ನಿನ್ನವಳು
ಆದೆ ನಿನ್ನವಳು
ನೋಡು
ಪ್ರೀತಿಯಲ್ಲಿ ನಾವು ಇಂದು
ತೀರ್ಮಾನ ಮಾಡಿ ಆಯ್ತು
ಆದರೆ ಯಾರು ಬಲ್ಲರು
(ನಮ್ಮ) ಹಣೆ ಬರಹ ಏನು ಅಂತ
ಹಣೆಬರಹ ಮಾತ್ರ ನಿಜವೇ
ನಾವೇನೇ ಅಂದರೂ
ನೋಡು ಆ ಚಂದಿರ ಮೌನದಿ
ಮಾಡಿಹ ಏನೋ ಸೂಚನೆ ||
ಆಗದಿರಲಿ ಹೀಗೆ ಎಂದೂ
ನನ್ನನ್ನು ಬಿಟ್ಟು ಹೋಗಬೇಡ
ಎಲ್ಲೋ ಹೋಗಿ ಯಾರದೋ ಜಗವ ಕಟ್ಟಬೇಡ
ನಾ ನಡುವೆ ಇರಲು
ದಂಡೆಯನು ನೀ ಸೇರಬೇಡ
ನೋಡು ಆ ಚಂದಿರ ಮೌನ
ಮಾಡಿಹ ಏನೋ ಸೂಚನೆ ||
ಎದೆಯಲ್ಲಿ ನಿನ್ನ ಹೊರತು ಬೇರಾರೂ ಇಲ್ಲ ನನಗೆ ನಿನ್ನ ಹೃದಯವನು ನೀ ಕೇಳು
ಅದರಲ್ಲಿ ಏನು ಇಹುದು
ನನ್ನ ತೀರ್ಮಾನವನ್ನ
ಪ್ರಕೃತಿಯೇ ಹೇಳಿ ಇಹುದು
ನೋಡು ಆ ಚಂದಿರ ಮೌನದಿ
ಮಾಡಿಹ ಏನೋ ಸೂಚನೆ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!