ಏನನ್ನಲೀ ನಾನು ನಮ್ಮ ಸಂಪದದ ಈ ಗರಿಮೆಯನು
ಸಂಪದಿಗನಾದುದಕೆ ನಾನಿಂದು ಹೆಮ್ಮೆ ಪಡುತಿಹೆನು

ಪತ್ರಿಕೆಗಳ ಹಂಗು ಇಲ್ಲದೆಯೇ ಬರೆಯಬಹುದಿಲ್ಲಿ
ಸಂಪಾದಕರುಗಳ ತಿರಸ್ಕಾರದ ಭಯವಿಲ್ಲ ಇಲ್ಲಿ

ಪತ್ರಿಕೆಗಳಿಗೆ ನಿಜದಿ ಓದುಗರು ಲಕ್ಷಾಂತರ ಮಂದಿ
ಸಂಪದದಲಿ ಓದುಗರು ಕೆಲವು ಸಾವಿರ ಮಂದಿ

ಓದುಗರು ಕಡಿಮೆಯಾದರೂ ಚಿಂತಿಲ್ಲ ಸಂಪದದಡಿ
ಪತ್ರಿಕೆಯಿಂದ ಎತ್ತಿ ಇಲ್ಲಿ ಮತ್ತೆ ಪ್ರಕಟಿಸುವುದ ನೋಡಿ

ಸ್ವಂತ ಪತ್ರಿಕೆ ಇದ್ದೂ ಹೋಗುತಿಹರು ಸಂಪದದ ಮೊರೆ
ಪ್ರತಿಕ್ರಿಯೆ ಸಿಕ್ಕರಷ್ಟೇ ಹಗುರವಾಗುವುದು ಅವರ ಹೊರೆ

ಅಲ್ಲಿ ಲಕ್ಷಾಂತರ ಓದುಗರು ಇದ್ದರೂ ಪ್ರಯೋಜನವಿಲ್ಲ
ಇಲ್ಲಿ ನೂರು ಮಂದಿಯ ಪ್ರತಿಕ್ರಿಯೆಗಳು ಸಿಗುವುದಲ್ಲಾ

ಎಷ್ಟು ಮಂದಿಯನು ಮುಟ್ಟಿದೆ ಎನ್ನುವುದಲ್ಲ ಮುಖ್ಯ
ಸ್ಪಂದಿಸುವ ಓದುಗರೊಂದಿಗೆ ಬೆಳೆಯಬೇಕು ಸಖ್ಯ

ಸಂಪದಿಗನಾದುದಕೆ ನಾನಿಂದು ಹೆಮ್ಮೆ ಪಡುತಿಹೆನು
ಏನನ್ನಲೀ ನಾನು ನಮ್ಮ ಸಂಪದದ ಈ ಗರಿಮೆಯನು