ನಾನೂ ಓದಬೇಕೆಂಬಾಸೆ ತುಂಬಿದೆ ನನ್ನೀ ಮನದೊಳಗೆ
ಊರೂರು ಸುತ್ತಾಡಿ ಬಂದೆನದಕೆ ಮಿಡ್ ಲ್ಯಾಂಡಿನೊಳಗೆ
ಪ್ರೇಮ ಪತ್ರಗಳ ರವಾನಿಸುವ ಕೆಲಸಕ್ಕೆ ಈಗಿಲ್ಲ ಅಷ್ಟು ಬೇಡಿಕೆ
ಈ ಸಮೋಸಗಳಿಂದಾಗಿ ಈಗ ಇಲ್ಲ ಪತ್ರ ಬರೆಯುವ ವಾಡಿಕೆ
ಓದು ಬರಹ ತಿಳಿಯದ ನಾನಿಳಿಯ ಬಹುದಿತ್ತು ರಾಜಕೀಯಕ್ಕೆ
ಆದರೆ ರೋಸಿಹೋಗಿದೆ ಮನಸ್ಸು ಅಲ್ಲಿನ ಹೊಲಸು ಕಿತ್ತಾಟಕ್ಕೆ
ಇನ್ನು ಉಳಿದದ್ದೆಂದರೆ ಚಿತ್ರರಂಗದಲಿ ಕೈಯಾಡಿಸುವಾ ಆಸೆ
ಅದಕ್ಕೆ ಮೊದಲು ಸ್ವಲ್ಪ ಓದು ತಿಳಿದು ತಯಾರಾಗುವ ಆಸೆ
ಮಸಕ್ಕಲಿಯನಾಡಿಸಿ ಕೋಟಿಗಟ್ಟಲೆ ಸಂಪಾದಿಸಿದರಂತೆ
ನಾನೂ ಎರಡಕ್ಷರ ಕಲಿತರೆ ನನ್ನನ್ನೂ ಕರೆಯಬಹುದಂತೆ
ಓದು ತಿಳಿಯದ ಮಸಕ್ಕಲಿಗೇ ಅಷ್ಟು ಬೇಡಿಕೆ ಇದ್ದಿರುವಾಗ
ಓದು ಕಲಿತರೆ ಹೆಚ್ಚಿಸಿಕೊಳ್ಳಬಹುದೇನೋ ನನ್ನ ಬೆಲೆ ಆಗ
ಓದು ತಿಳಿಯದ ಮಸಕ್ಕಲಿಗೆ ಅಲ್ಲಿ ಮಾತು ದೊರಕದಂತಾಯ್ತು
ಓದು ಕಲಿತರೆ ನನ್ನಿಂದ ಆಡಿಸಬಹುದೇನೋ ಎರಡು ಮಾತು
**********************************
ಇದು, ಇಲ್ಲಿರುವ ಗುರು ಬಾಳಿಗರ ಈ ಚಿತ್ರ ಬರಹಕ್ಕೆ ನನ್ನ ಪ್ರತಿಕ್ರಿಯೆ
http://sampada.net/blog/gurubaliga/14/04/2009/19111
ಪ್ರತಿಕ್ರಿಯೆ (2)