ಈಗ ಈ ಟಿ ವಿ ವಾರ್ತೆಗಳನ್ನು ನೋಡುತ್ತಿದ್ದಾಗ ಇದನ್ನು ಗಮನಿಸಿದೆ
ಮಾಜಿ ಕೇಂದ್ರ ಸಚಿವರಾದ ಮುನಿಯಪ್ಪನವರು(ಯಾವ ಕ್ಷೇತ್ರವೆಂದು ಗೊತ್ತಿಲ್ಲ) ಬೆಳಿಗ್ಗೆ ತಾವು ಮತ ಹಾಕಬೇಕಾದ ಸ್ಥಳಕ್ಕೆ ಪತ್ನಿ ಯೊಡನೆ ಆಗಮಿಸಿ ಅಲ್ಲಿದ್ದ ಮತಯಂತ್ರಕ್ಕೆ ಹೂ ಕುಂಕುಮದಿಂದ ಪೂಜೆ ಮಾಡಿ ಮಂಗಳಾರತಿಯನ್ನೂ ಎತ್ತಿ ಅದನ್ನು ಅಲ್ಲಿದ್ದವರಿಗೆ ಕೊಟ್ಟು ಮತಯಂತ್ರವನ್ನು ಕಣ್ಣಿಗೊತ್ತಿಕೊಂಡು ನಮಸ್ಕಾರ ಮಾಡಿ ಮತ ಚಲಾಯಿಸಿದರು.
ಮೌಡ್ಯತೆಯ ಪರಮಾವಧಿ ಇದು ಅನ್ನಿಸ್ತು ನಂಗೆ..
ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ..
ಪೂಜೆ ಮಾಡಕ್ಕೂ ಅರ್ಥ ಇರಬೇಕು ಅಲ್ವ??
ನನ್ನಿ
ದೃಶ್ಯ ಪ್ರದೀಪ :)
ಪ್ರತಿಕ್ರಿಯೆ (6)