ಎಲ್ಲರಿಗೂ ನನ್ನ ನಮಸ್ಕಾರಗಳು.
ಇದು ನನ್ನ ಮೊದಲ ಬ್ಲಾಗು. ಬರೆದು ತುಂಬಾ ದಿನವಾದ್ದರಿಂದ ಏನು ಬರೆಯಬೇಕೆಂಬುದರ ಬಗೆಗೆ ಬಹಳವೇ ಆಲೋಚಿಸುವಂತಾಗುತ್ತದೆ. ಆದರೂ ಏನಾದರೂ ಬರೆಯಬೇಕೆಂಬ ಹಂಬಲ ಬಹು ದಿನಗಳಿಂದ. ನನ್ನ ಹೆಸರು ಕಾರ್ತಿಕ್ ಅಂತ. ನನ್ನ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು. ಅಲ್ಲಿಯೇ ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದೆ. ದಾವಣಗೆರೆಯ ಧ.ರಾ.ಮ. ಕಾಲೇಜಿನಲ್ಲಿ ನನ್ನ ಎರಡು ವರ್ಷದ ಪಿ.ಯು.ಸಿ ಶಿಕ್ಷಣವನ್ನು ಮುಗಿಸಿದೆ ನಂತರ ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ನನ್ನ ಮೂರು ವರ್ಷದ ಪದವಿ ಮತ್ತು ರಾಮಯ್ಯ ಕಾಲೇಜಿನಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಗಳಿಸಿ ಈಗ ಪ್ರಸ್ತುತವಾಗಿ ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತಿದ್ದೇನೆ. ಇವಿಷ್ಟು ನನ್ನ ಬಗೆಗಿನ ಸಂಕ್ಷಿಪ್ತ ಪರಿಚಯ.