"ಇದೀಗ ಪ್ರಸಾರವಾದ ಹಾಡು S P ಬಾಲಸುಬ್ರಹ್ಮಣ್ಯ ಮತ್ತು S ಜಾನಕಿ ಅವರ ಧ್ವನಿಯಲ್ಲಿ ಕೇಳಿದಿರಿ.."
ನಮ್ಮ ಇಡೀ ಬಾಲ್ಯ ಕಳೆದದ್ದು ಇವರ ಹಾಡು ಕೇಳುತ್ತಾ. ಈಗ ಕೆಲವೊಮ್ಮೆ ಅನಿಸಿದ್ದುಂಟು ಯಾಕೆ ಹೀಗೆ? ಬರಿ ಬೇರೆ ಭಾಷೆಯವರೇ ಕನ್ನಡ ಹಾಡುಗಳನ್ನ ಹಾಡಿದ್ದು ಅಂತ.
ಆದರೆ ಅವರದೇ ಧ್ವನಿಯಲ್ಲಿ "ಇದೇ ನಾಡು ಇದೇ ಭಾಷೆ ಎಂದೆಂದು ನನನ್ನದಾಗಿರಲಿ, ಎಲ್ಲೆ ಇರಲಿ ಹೇಗೆ ಇರಲಿ ಕನ್ನಡವೇ ನನ್ನ ಉಸಿರಲ್ಲಿ" ಎಂದಾಗ ಏನೋ ಒಂದು ಹೆಮ್ಮೆ. S ಜಾನಕಿ ಅವರ ಒಂದು ಇಂಟರ್ವ್ಯೂ ಅಲ್ಲಿ ಇಂದೇ ಕೇಳಿದೆ, ಅವರು ಹಾಡಿದ ಬೇರೆ ಬೇರೆ ಭಾಷೆಗಳಲ್ಲಿನ ಸಂಖ್ಯೆಗಿಂತ ಕನ್ನಡ ಹಾಡಿನ ಸಂಖ್ಯೆ ಹೆಚ್ಚಂತೆ.
ಅಂಥ S ಜಾನಕಿ ನಿನ್ನೆ ವಿಧಿವಶ ಆಗಿದ್ದು ನಿಜಕ್ಕೂ ತುಂಬಲಾರದ ನಷ್ಟ. ನಟರು ತಮ್ಮ ನಟನೆಯಿಂದ ಹೇಗೆ ಅಮರರಾಗುತ್ತಾರೋ ಅವರಿಗಿಂತ ಹೆಚ್ಚು ಗಾಯಕರು. ತಮ್ಮ ಸುಶ್ರಾವ್ಯ ಕಂಠದಿಂದ ಎಷ್ಟೋ ನಟ ನಟಿಯರಿಗೆ ಧ್ವನಿ ಆಗಿರುತ್ತಾರೆ.
ಅದು ದೇವರ ಪದ "ಪೂಜಿಸಲೆಂದೇ ಹೂಗಳ ತಂದೆ.." ಆಗಿರಬಹುದು ಇಲ್ಲವೇ ಗಾಳಿಮಾತು ಚಿತ್ರದ "ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆಯಲ್ಲಿರುವೆ.." ಆಗಿರಬಹುದು, S ಜಾನಕಿ ಎಲ್ಲ ಹಾಡುಗಳಲ್ಲೂ ಧ್ವನಿಯಾಗಿದ್ದಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!