ಹಲವು ತಿಂಗಳುಗಳ
ನಂತರ ನಾನಾಗಿದ್ದೇನೆ
ಮತ್ತೀಗ ಏಕಾಂಗಿ
ಏಕೆಂದರೆ ಮನೆಯಲ್ಲಿಲ್ಲ
ಈಗ ನನ್ನ ಮಗಳು
ಮತ್ತೆನ್ನ ಅರ್ಧಾಂಗಿ
ವರುಷವಾಗಿತ್ತು ನಮ್ಮ
ಮಗಳು ಊರತ್ತ
ಹೋಗದೇ
ತಪಸ್ಸಿಗೆ ಕೂತಂತಿತ್ತು
ಆಕೆ ತನ್ನ ಓದಿನಿಂದ
ಕಿಂಚಿತ್ತೂ ಬಿಡುವಿಲ್ಲದೇ
ಆಕೆಯಿಂದಾಗಿ ಆಕೆಯ
ತಾಯಿಗೂ ಹೋಗಲು
ಆಗಿರಲಿಲ್ಲ ಊರತ್ತ
ಏನೇ ಅವಶ್ಯಕತೆ
ಇದ್ದರೂ ನಾನೇ
ಓಡಬೇಕಿತ್ತು ಅತ್ತ
ಹಗಲು ಕಛೇರಿಯಲ್ಲಿ
ಹೇಗಾದರೂ ದಿನ
ಕಳೆದು ಹೋಗುತ್ತದೆ
ಮನೆಗೆ ಹೋದರೆ
ಅಲ್ಲಿಯ ಮೌನವೆನ್ನನು
ತಿನ್ನಲು ಬರುತ್ತದೆ
ಎಲ್ಲರೂ ಇಲ್ಲಿದ್ದಾಗ
ಹೆಚ್ಚು ಮಾತಾಡದೇ
ಮೌನವಾಗಿರುವಾಸೆ
ಯಾರೂ ಇಲ್ಲದಾಗ
ಯಾರಾದರೂ ನನ್ನನ್ನು
ಮಾತಾಡಿಸಲೆಂಬಾಸೆ
ಯಾವುದನ್ನೂ ರೂಢಿ
ಮಾಡಿಕೊಂಡು ಬಿಟ್ಟರೆ
ಅದು ಬಲು ಕಷ್ಟ
ಯಾರ ಹಂಗೂ ಇಲ್ಲದೆ
ಬಾಳುವಭ್ಯಾಸವಾದರೆ
ಈ ಬಾಳಿನಲ್ಲಿಲ್ಲ ನಷ್ಟ
************
ಪ್ರತಿಕ್ರಿಯೆ (7)