ಸುಮ್ನೆ ಒಂದ್ ಬ್ಲಾಗ್ ಬರೀಬೇಕು ಅಂತ ;) . ಇಂತ ಈ ಸಂದರ್ಭದಲ್ಲಿ ನಂ ತಲೆಗೆ ಹೊಳೆದದ್ದು ಕ್ಯಾಮೆರ ಬಗ್ಗೆ ! http://sampada.net/article/20301 ನಲ್ಲಿ ಸಣ್ಣ ಚರ್ಚೆ ನಡೇತಾ ಇತ್ತಲ್ವ ಅದಕ್ಕೆ ಇರಬಹುದು. ;)
ಗೂಗಲ್ ನಲ್ಲಿ ಹುಡುಕಿ ಹೆಚ್ಚಿನ ಮಾಹಿತಿ ಹಾಕಿ ವಿವರವಾಗಿ ಲೇಖನ ಬರದು ನನಗೆ ರೂಡಿಯಿಲ್ಲ. ತಲೆಗೆ ಏನು ಬರುತ್ತೋ ಅದು ಅಷ್ಟೇ!! ಹಾಗಾಗಿ ಈ ಕ್ಷಣದಲ್ಲಿ ನನ್ ತಲೆಗೆ ಕ್ಯಾಮರಾ ಬಗ್ಗೆ ಹೊಳೆದಷ್ಟು.
ಹಿಂದೆ ನಾನು ಕ್ಯಾಮೆರಾ ತಗೋಬೇಕು ಅಂತ ಯೋಚಿಸ್ದಾಗ, ಕ್ಯಾಮರಾ ಬಗ್ಗೆ ಕೆಲ ಮಾಹಿತಿ ಕಲೆ ಹಾಕಿದ್ದೆ. ಅದನ್ನೇ ಇಲ್ಲಿ ಬರೀತಾ ಇದ್ದೀನಿ. ತಿಳಿದವರುಹೆಚ್ಚಿನ ಮಾಹಿತಿ ಸೇರಿಸಿ,
ಒಂದು ಡಿಜಿಟಲ್ ಕ್ಯಾಮರಾ ತಗೋಬೇಕು ಅಂತ ನೀವು ತೀರ್ಮಾನಿಸಿದಾಗ ಕೆಳಗಿನ ಕ್ಯಮರಾದಲ್ಲಿನ ವಿಷಯಗಳನ್ನು ನಾವು ಗಮನಿಸಬೇಕು.
೧. Optical Zoom
ಚಿತ್ರದ ಸ್ಪಷ್ಟತೆಯನ್ನು ಕಳೆದುಕೊಳ್ಳದೆ ಒಂದು ಸನ್ನಿವೇಶವನ್ನು ದೊಡ್ಡದು ಮಾಡಿ ಅದನ್ನು ಹಿಡಿದಿಡುವ ದಕ್ಷತೆ.
ಉದಾಹರಣೆಗೆ... ಒಂದು ಕ್ಯಮರಾದಲ್ಲಿನ ಆಪ್ಟಿಕಲ್ zoom 10X ಇದೆ ಅಂದು ಕೊಳ್ಳಿ .. ಇದರ ಅರ್ಥ ನೀವು ಇಲ್ಲಿಂದಾನೆ ದೂರದ ಚಿತ್ರವನ್ನು ಹತ್ತು ಪಟ್ಟು ದೊಡ್ಡದು ಮಾಡಿಕೊಂಡು ಬೇಕಾದ ಭಾಗವನ್ನು ಸೆರೆ ಹಿಡಿಯಬಹುದು. ಕಾಡಿನಂತ ಸನ್ನಿವೇಶಗಳಲ್ಲಿ ದೂರದೂರದ ಚಿತ್ರಗಳನ್ನು ಚಿತ್ರದ ಸ್ಪಷ್ಟತೆ ಕಳೆದುಕೊಳ್ಳದೆ ತೆಗೆಯಲು ಇದು ಸಹಕಾರಿ. 3X ಮತ್ತು 4X ಆಪ್ಟಿಕಲ್ zoom ಇತ್ತೀಚಿನ ಡಿಜಿಟಲ್ ಕ್ಯಾಮರಾಗಳಲ್ಲಿ ಸಾಮಾನ್ಯ.
ಆಪ್ಟಿಕಲ್ zoom ಜಾಸ್ತಿಯಾದಂತೆ ಕ್ಯಮರಾದ ಗಾತ್ರವೂ ದೊಡ್ದದಾಗುತ್ತೆ.
ಸಾಮಾನ್ಯವಾಗಿ ಒಂದು ಕ್ಯಾಮರಾಗೆ ಡಿಜಿಟಲ್ zoom ಕಾರ್ಯಕ್ಷಮತೆಯೂ ಇರುತ್ತೆ.. ಆದ್ರೆ ಇಲ್ಲಿಯೂ ಸಹ ನಾವು ದೊಡ್ಡದು ಮಾಡಬಹುದಾದರೂ, ಸನ್ನಿವೇಶದ / ಚಿತ್ರದ ಸ್ಪಷ್ಟತೆ ಕಡಿಮೆಯಾಗುತ್ತೆ.
೨. Resolution :
ಇದು ಚಿತ್ರವನ್ನು ಸೆರೆ ಹಿಡಿದ ನಂತರ ಸೇವ್ ಮಾಡುವ ಸಂದರ್ಭದಲ್ಲಿ ಗಮನಕ್ಕೆ ಬರುತ್ತೆ.
ಒಂದು ಕ್ಯಾಮರಾದ resolution ೮ Mega pixcels ಅಂದುಕೊಂಡರೆ .. ಸೆರೆ ಹಿಡಿದ ಚಿತ್ರವನ್ನು 80 ಲಕ್ಷ ಬಿಂದುಗಳನ್ನಾಗಿ ಉಳಿಸುತ್ತೆ. ಹೆಚ್ಚು ಬಿಂದುಗಳಾಗಿ ಉಳಿಸಿದಷ್ಟೂ ಹೆಚ್ಚು ಹೆಚ್ಚು ಸ್ಪಷ್ಟತೆ ಉಳಿಸಿದ ಚಿತ್ರಕ್ಕೆ ಇರುತ್ತೆ.
ಈ resolution ಜಾಸ್ತಿಯಾದಂತೆ ಸೇವ್ ಮಾಡಲು ಹೆಚ್ಚು ಹೆಚ್ಚು ಮೆಮೊರಿ ಬೇಕಾಗುತ್ತೆ. ಅಂದರೆ ಚಿತ್ರದ ಗಾತ್ರ, byte ಗಳಲ್ಲಿ ಹೆಚ್ಚಾಗುತ್ತೆ! (ಹಾ.. ಕ್ಯಮೆರಾದಲ್ಲಿನ compression ವಿಧಾನವನೂ ಇಲ್ಲಿ ನಾವು ಗಮನದಲ್ಲಿ ಇಡಬೇಕು)
೩.Image stability
ಸಾಮಾನ್ಯವಾಗಿ , ಸರಳವಾಗಿ IS ಅಂತ ಕ್ಯಾಮರಾದ ಮೇಲೆ ನಮೂದಿಸಿರುತಾರೆ. ಇದು ಚಲಿಸುತ್ತಿರುವ ವಸ್ತುಗಳ ಚಿತ್ರ ತೆಗೆಯುವಾಗ ಅತ್ವ ನಾವು ಚಲಿಸುತ್ತಿರುವಾಗ ಮತ್ತು ರಾತ್ರಿಯಲ್ಲಿ ( ಹೆಚ್ಚು ಬೆಳಕಿಲ್ಲದಾಗ) ಚಿತ್ರ ತೆಗೆಯುವಾಗ ಚಿತ್ರಗಳು ಶೇಕ್ / blurr ಆಗುವುದು ಸಹಜ. ಇಂತಹ ಸಂದರ್ಭದಲ್ಲಿ IS ಹೆಚ್ಚು ಸ್ಪಷ್ಟ ಚಿತ್ರಗಳನ್ನು ತೆಗೆಯಲು ಸಾಧ್ಯ ಆಗುವಂತೆ ಮಾಡುತ್ತೆ.
೪. Wde angle
ಒಂದು ಕೊಟ್ಟ / ನಿಂತುಕೊಂಡ ( ಫೋಟೋ ತೆಗೆಯುವವ ) ಜಾಗದಿಂದ ಅತಿ ಹೆಚ್ಚಿನ ಭಾಗವನ್ನು ಸೆರೆ ಹಿಡಿಯಲು ಇದು ಸಹಕಾರಿ. ನಿಮ್ಮ ಕ್ಯಾಮೆರಾ ಬಳಕೆ ಸಾಮನ್ಯವಾದ ಮನೆಯಲ್ಲಿನ ಸನ್ನಿವೇಶಗಳನ್ನು ಸೆರೆ ಹಿಡಿಯುವಾದಾರೆ ಇದು ಮುಖ್ಯ. ಹತ್ತಿರದಿಂದ ಹೆಚ್ಚು ಹಗಲವಾಗಿ ಕವರ್ ಮಾಡಿದ ಚಿತ್ರ ತೆಗೆಯಬಹುದು.
ಸಾಮಾನ್ಯವಾಗಿ, ಒಂದು ಕೊಟ್ಟ ಗಾತ್ರದ ಡಿಜಿಟಲ್ ಕೆಮೆರಾದಲ್ಲಿ, ಹೆಚ್ಚು ಆಪ್ಟಿಕಲ್ zoom ಇರುವ ಕ್ಯಾಮೆರಾಗೆ ಕಡಿಮೆ wide angle ಇರುತ್ತೆ. ಮತ್ತು ಹೆಚ್ಹಿನ wide angle ಇರುವ ಕೆಮೆರಾದ ಆಪ್ಟಿಕಲ್ zoom ಕಡಿಮೆ ಇರುತ್ತೆ. ಎರಡೂ ಬೇಕು ಅಂದ್ರೆ ಕೆಮರಾ ಗಾತ್ರ ಜಾಸ್ತಿಯಾಗುತ್ತೆ.
ಹೆಚ್ಚಿನ / ಸ್ಪೆಸಿಫಿಕ್ ಆದಂತ ಮಾಹಿತಿ ಮುಂದೆ ;) ...
ಪ್ರತಿಕ್ರಿಯೆ (2)