"ಥಟ್ ಅಂತ ಕವನ" ಬರೆಯುವ ಸ್ಪರ್ಧೆ ಇದ್ದರೆ
ನನಗೂ ಹೇಳಿ ಬರುತ್ತೇನೆ ಪುರುಸೊತ್ತಿದ್ದರೆ
ನನಗಿನ್ನೇನೂ ಬೇಕಾಗಿಲ್ಲ ಪುರಸ್ಕಾರ ಪ್ರಶಸ್ತಿ
ಅನ್ನುತ್ತೀದ್ದೀರಲ್ಲಾ "ಆಶು ಕವಿ" ಇದೇ ಜಾಸ್ತಿ
ಪದ್ಯರೂಪದಲಿ ಬರೆಯುವ ರೂಡಿಯಾಗಿ ಬಿಟ್ಟಿದೆ
ಲೇಖನಗಳ ಸಂಖ್ಯೆ ಏರದೇ ಅಲ್ಲಿಗಲ್ಲಿಗೇ ನಿಂತಿದೆ
ಓದುಗರ ಮನಮುಟ್ಟಿ ಸಂತಸ ನೀಡಿದರೆ ಕವನ
ನನಗಾತ್ಮ ತೃಪ್ತಿ ದೇವರಿಗೆ ಮಾಡಿದಂತೆ ಹವನ
ಹೊಗಳಿ ಹೊಗಳಿ ನನ್ನನ್ನು ಏರಿಸಿದರೆ ನೀವು ಮೇಲೆ
ನಿಮ್ಮ ನಿರೀಕ್ಷೆಯ ಮಟ್ಟವೂ ಏರಬಹುದು ಆಮೇಲೆ
ಹತ್ತು "ಗೋಲು" ಉಳಿಸಿದ "ಗೋಲಿ"ಯ ಹೊಗಳುವರೆಲ್ಲಾ
ಒಂದು "ಗೋಲು" ತಪ್ಪಿದರೆ ಎಲ್ಲರೂ ಉಗಿಯುವರಲ್ಲಾ...!
ಪ್ರತಿಕ್ರಿಯೆ (3)