ದೂರದಿಂದಾರ ಮನೆಗೆ

ಅತಿಥಿಗಳು ಸಂತಸದಿ

ಬರುವರೋ - ಅವನೀಗ 

ದಿಟದಿ ಸಂಸಾರೊಂದಿಗ.

ಮಿಕ್ಕವರಿಗೆ ಏನೆನಬೇಕು

ಎಂದು ಕೇಳುವೆಯಾ?

ಅಲ್ಲವೇ ಅವರು ಬರಿಯ

ಮನೆಯ ಕಾವಲಿನವರು?

ಸಂಸ್ಕೃತ ಮೂಲ:

ದೂರಾದತಿಥಯೋ ಯಸ್ಯ ಗೃಹಮಾಯಾಂತಿ ನಿರ್ವೃತಾಃ |

ಗೃಹಸ್ಥಃ ತು ವಿಜ್ಞೇಯಾಃ ಶೇಷಾಸ್ತು ಗೃಹರಕ್ಷಿಣಃ ||

-ಹಂಸಾನಂದಿ