ಈಗಾಗಲೇ ಈ ಕೆಳಗಿನವರು ಆಸಕ್ತಿ ತೋರಿಸಿದರಾದ್ದರಿಂದ ನಾಟಕರಂಗದ ಸದಸ್ಯರನ್ನಾಗಿ ಮಾಡಲಾಗಿದೆ.
೧.ಅನಾಮಿಕ
೨.ಶ್ರೀಹರ್ಷ ಸಾಲಿಮಠ....................................... ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೩.ಶೋಭಾ.................................................... ರಂಗ ಸಜ್ಜಿಕೆ, ಉಡುಗೆ-ತೊಡುಗೆ, ಮೇಕಪ್ಪು
೪.ವಿನಯ್ ಕುಮಾರ್......................................... ಅಭಿನಯ, ರಂಗ ಸಜ್ಜಿಕೆ,
೫.ಪಾಲಚಂದ್ರ ................................................ ರಂಗ ಸಜ್ಜಿಕೆ
೬.ನಂದಕುಮಾರ್ ............................................ ಗಾಯನ, ಅಭಿನಯ
೭.ವಿನುತ ಎಮ್.ವಿ............................................ ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೮.ಹರೀಶ್ ಆತ್ರೇಯ .......................................... ಅಭಿನಯ
೯.ಅರವಿಂದ್ .................................................. ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೧೦.ಮೊಡ್ಮಣಿ/ ಮಂಜುನಾಥ್.ವಿ .............................ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೧೧.ರಾಕೇಶ್ ಶೆಟ್ಟಿ .............................................ನಿರ್ವಹಣಾ ತಂಡ , ರಂಗ ಸಜ್ಜಿಕೆ
೧೨.ವಿನಯ/ಆರ್ಯ.............................................ರಂಗ ಸಜ್ಜಿಕೆ
೧೩.ಮಾಲತಿ....................................................ಅಭಿನಯ
೧೪.ಜಯಲಕ್ಷ್ಮಿ ಪಾಟೀಲ್. .....................................ಅಭಿನಯ
೧೫.ದೃಶ್ಯ ಪ್ರದೀಪ
೧೬.ಅಶೋಕ್ ಕುಮಾರ್
೧೭.ಆಸು ಹೆಗ್ಡೆ
೧೮.ದಿವ್ಯ ಭಟ್ ಬಾಳೆಕಾನ
೧೯.ಹರಿಹರಪುರಶ್ರೀಧರ
೨೦.ಅನಿಲ್ ರಮೇಶ್ ............................................ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೨೧.ರಶ್ಮಿ ಪೈ.....................................................ಅಭಿನಯ, ರಂಗ ಸಜ್ಜಿಕೆ
೨೨.ನಾಗರಾಜ್..................................................ಅಭಿನಯ, ನಿರ್ವಹಣಾ ತಂಡ , ರಂಗ ಸಜ್ಜಿಕೆ
೨೩.ಗಿರೀಶ ರಾಜನಾಳ..........................................ಅಭಿನಯ
೨೪.ವಿಜಯ್ ....................................................ಅಭಿನಯ
೨೫.ಶ್ರೀನಿವಾಸ್.................................................ಅಭಿನಯ

ಇನ್ನುಳಿದಂತೆ ಇನ್ನು ಸುಮಾರು ಜನ ಸಂಪದಿಗರ ನಿರೀಕ್ಷೆಯಲ್ಲಿದ್ದೇನೆ... ಈ ನಾಟಕರಂಗದಲ್ಲಿ ಬೆಂಗಳೂರಿನ ಹೊರಗಿನವರಿಗೂ ಆಹ್ವಾನವಿದೆ. ಅವರು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬಹುದು..

ನಾನು ನನಗೆ ತಿಳಿದಂತೆ ಈ ಕೆಲವು ರೂಪುರೇಷೆಗಳನ್ನು ಮಾಡಿದ್ದೇನೆ..
೧.ಈ ನಾಟಕರಂಗಕ್ಕೆ ಒಂದು ನಿರ್ವಹಣಾ ತಂಡವನ್ನು ರಚಿಸುವುದು. ನಮ್ಮ ನಾಟಕಕ್ಕೆ ಕಥೆಯ ಆಯ್ಕೆಯಿಂದ ಹಿಡಿದು ಎಲ್ಲಾ ಸಂಪನ್ಮೂಲಗಳನ್ನು ಕ್ರೋಡಿಕರಿಸುವುದರ ಜವಾಬ್ದಾರಿ ಈ ತಂಡಕ್ಕಿರುತ್ತದೆ.ಈ ತಂಡಕ್ಕೆ ಸೇರಲು ಎಲ್ಲರಿಗೂ ಮುಕ್ತ ಆಹ್ವಾನವಿರುತ್ತದೆ.
೨.ಕಥೆಯು ಸಂಪದದ ಬಳಗದವರದೇ ಆಗಬೇಕು...
೩.ಕಥೆಯು ಬರೆಯಲು ಎಲ್ಲರಿಗೂ ಆಹ್ವಾನವಿದೆ. ಅದನ್ನು ಅಂತಿಮಗೊಳಿಸುವ ನಿರ್ಧಾರ ನಿರ್ವಹಣಾ ತಂಡದ್ದು.
೪. ಒಮ್ಮೆ ಕತೆಯು ಅಂತಿಮವಾದ ಮೇಲೆ .. ಆಯ್ಕೆಯಾಗದ ಕತೆಗಳ ಕುರಿತಾಗಿ ಯಾವುದೇ ಚರ್ಚೆ ಮಾಡಬಾರದು.ಮತ್ತು ಅದನ್ನು ಯಾರೂ ವಯಕ್ತಿಕವಾಗಿ ತೆಗೆದುಕೊಳ್ಳಬಾರದೆಂದು ವಿನಂತಿ.
೫.ಕಥೆಯು ಪ್ರಸಕ್ತ ವಿದ್ಯಮಾನಗಳನ್ನು ಕುರಿತಾಗಿ ಹಾಸ್ಯ ಲೇಪನದಿಂದ ಕೂಡಿರಬೇಕು.
೬.ಕಥೆಯ ವಿಷಯಗಳು
ರಾಜಕೀಯ,
ಶಿಕ್ಷಣ,
ಜಾಗತಿಕ ತಾಪಮಾನ,
ಅಥವಾ ಗಂಭೀರ ಚರ್ಚೆ, ವಾದ-ವಿವಾದಕ್ಕೊಳಗಾಗದ ಯಾವುದೇ ವಿಷಯವಾಗಿರಬಹುದು.
೭.ಕಥೆಯು ನಾಟಕ ಶೈಲಿಯಲ್ಲಿರಬೇಕು.. ಅಂದರೆ ಸಂಭಾಶಣೆಯೊಂದಿಗೆ.
೮. ಆಸಕ್ತಿ ಇರುವವರು... ತಮಗೆ ಯಾವುದರಲ್ಲಿ ಆಸಕ್ತಿ ಇದೆಯೆಂದು ತಿಳಿಸಿದರೆ ಉತ್ತಮ.
ಉದಾ:ರಂಗ ನಿರ್ವಹಣೆ, ರಂಗ ಸಜ್ಜಿಕೆ, ತೆರೆಯ ಮುಂದೆ ಹೀಗೆ...

ಇವಿಷ್ಟು ಸದ್ಯಕ್ಕೆ ನನಗೆ ತೋಚಿದ್ದು. ಇದರಲ್ಲಿ ಯಾವುದಾದರು ತೆಗೆಯುವುದಿದ್ದರೆ ತಿಳಿಸಬಹುದು.ಮತ್ತು ನಿಮ್ಮ ಸಲಹೆ ಸೂಚನೆಗಳನ್ನು ಸೇರಿಸಬಹುದು.

ಸಂಪದ ನಾಟಕರಂಗದ ಬಗ್ಗೆ ಹರಿಯವರು ತಮ್ಮ ಅಭಿಪ್ರಾಯನ್ನು ತಿಳಿಸಬೇಕಾಗಿ ವಿನಂತಿ.