ನಿನ್ನ ಒಲವಿನ ಕೊಳಲ ಧ್ವನಿಯಲಿ ನಾದವಾಗಿಹ ಧ್ವನಿಯು ನಾ
ನಿನ್ನ ಮನಸಿನ ಅಂತರಾಳದಿ ತುಡಿತಿಹ ವ್ಯಕ್ತಿ ನಾ

ನಿನ್ನ ಕಣ್ಣಿನ ದೃಷ್ಟಿಮುಂದೆ ಚಲಿಸುತಿಹ ಸೃಷ್ಟಿ ನಾ
ನಿನ್ನ ಮೆದುಳಿನ ಜಾನ್ಮೆಹಿಂದೆ ವ್ಯಕ್ತವಾಗಿಹ ಬುದ್ಧಿ ನಾ

ನೀನು ಪೊರೆಯುವ ಪ್ರೇಮ ಲೋಕಕೆ ನಾನೇ ತಾ ನಿಯಾಮಕ
ನಿನ್ನ ಕನಸಿನ ಕಣ್ಣ ಹಿಂದೆ ಬಂದು ಹೋಗುವ ಚಿತ್ರ ನಾ

ನೀನು ಮಾಡುವ ಪುಟ್ಟ ಹಡಗಿಗೆ ಆಧಾರದ ಜಲವು ನಾ
ನಿನ್ನ ಮನಸ್ಸಿನ ರೇಖಾ ಚಿತ್ರಕೆ ಕಣ್ಣ ಸೆಳೆಯುವ ಚಿತ್ತ ನಾ

ನನ್ನ ಪ್ರೇಮದ ಅಮರ ತೋಟಕೆ ನೀನೆ ತಾನೆ ಕುಸುಮವು
ನಿತ್ಯ ಅರಳುವ ಬಳ್ಳಿ ಹೂವಿಗೆ ನೀನೆ ತಾನೆ ಪ್ರಿಯ ಸಖಿ

ನೀನು ತೊರೆದರೆ ಉಳಿವುದೇನೆ? ನನ್ನ ಪ್ರೀತಿಯ ತೋಟವು.
ನಿತ್ಯ ಸುರಿಸುವ ತುಂತುರು ಸ್ಪರ್ಶ ಕೂಡ ನಿನ್ನ ಪ್ರೀತಿಯ ಕೊಡುಗೆಯು

ಸಾವು ನೋವು ಕಷ್ಟ ಸುಖಕೆ ನೀನೆ ತಾನೆ ಸಹ ಭಾಗಿನಿ
ನನ್ನ ಆತ್ಮದ ಅಮರ ಗಾನಕೆ ನೀನೆ ತಾನೆ ಸ ರಿ ಗ ಮ

ನಿನ್ನ ಮರೆತರೆ ಏನು ಉಳಿವುದು? ನನ್ನ ತನವು ನಿರಂತರ
ನನ್ನ ಶಕ್ತಿಯ ಸದುಪಯೋಗಕೆ ನೀನೆ ತಾನೆ ಸಹಾಯಕಿ

ನನ್ನ ಮನಸ್ಸಿನ ಗಂಧರ್ವ ಗಾನಕೆ ನೀನೆ ತಾನೆ ನರ್ತಕಿ
ನನ್ನ ಪ್ರೀತಿಯ ಸಾರ್ವಭೌಮಕೆ ನೀನೆ ತಾನೆ ರಾಣಿಯು

ನನ್ನ ಕಣ್ಣಿನ ಮಿಂಚಿನೋಟಕೆ ಕುಣಿದು ಹಾಡುವ ಹೂ ನೀ
ನನ್ನ ಮನಸ್ಸಿನ ರಂಗಿನಾಟಕೆ ಬಣ್ಣ ಬಣ್ಣದ ಚಿತ್ರ ನೀ

ನನ್ನ ತೋಳಿನ ಬಂಧಿ ನೀ ನನ್ನ ಬದುಕಿನ ಕೊಂಡಿ ನೀ
ನನ್ನ ಒಲವಿನ ಕಣ್ಣ ನೋಟಕೆ ನೀನೆ ತಾನೆ ದೃಷ್ಟಿಯು

ಮನಸಳಾಡುವ ಮನದಿ ತೋರುವ ಎಲ್ಲ ಚಿತ್ರವೂ ನಿನ್ನದೇ
ಸೃಷ್ಟಿ ಲೋಕದ ಸೊಬಗ ಸುರಿಸುವ ನೀನೆ ತಾನೆ ಪ್ರಕೃತಿ

ಪ್ರೇಮ ನೌಕೆಯ ದಡವ ಸೇರಲು ನೀನೆ ತಾನೆ ಅಂಬಿಗ
ನನ್ನ ಬಾಳಿನ ಪ್ರೇಮ ಕಡಲಿಗೆ ನೀನೆ ತಾನೆ ಚಾಲಕಿ

ಮುನಿಸಿಕೊಂಡರೂ ಮೋಹಗೊಂಡರೂ ನೀನೆ ತಾನೆ ನನ್ನ ಪ್ರೇಯಸೀ
ನಾನು ಬರೆಯುವ ಕವಿತೆಗೆಲ್ಲಕೆ ನೀನೆ ತಾನೆ ಭಾವವು

ನನ್ನ ಮನಸ್ಸಿನ ಸರ್ವ ಸೃಷ್ಟಿಗೆ ನೀನೆ ತಾನೆ ನಿಯಾಮಕಿ
ಎಲ್ಲರಿದ್ದರೂ ನನ್ನ ಬಯಸುವ ನಿನ್ನ ಪ್ರೀತಿಯೇ ರಕ್ಸೆಯು

ನೀನು ಮರೆತರೆ ನಾನು ಉಳಿಯನು ಈ ಲೋಕವನೆ ತೊರೆವನೆ
ಮರದ ಟೊಂಗೆಯ ಮೇಲೆ ಕುಳಿತಿಹ ಗಿಳಿಯೂ ಕೂಡ ನೀನೆಲೆ

ಅದರ ಕಂಠಕೆ ಇಂಪು ತರಿಸುವ ಮಧುರ ಧ್ವನಿಯೂ ನೀನೆಲೆ
ನಾನು ಇಡುವ ದಿಟ್ಟ ಹೆಜ್ಜೆಗೂ ನೀನೆ ತಾನೆ ಸ್ಪೂರ್ತಿಯು

ಕಣ್ಣು ತೆರೆದರೆ ನೀನೆ ಕಾಣುವೆ ಅಂತ ಪ್ರೀತಿಯು ನಿನ್ನದು
ನನ್ನ ಮಧುವಿನ ಜೇನ ಹೀರುವ ದುಂಬಿ ಕೂಡ ನೀನೆಲೆ

ನನ್ನ ಬದುಕಿನ ಬವಣೆಗಳಿಗೆ ನೀನೆ ತಾನೆ ಪರಿಹಾರವು
ನನ್ನ ಪ್ರೀತಿಯ ಮಧುರ ಬಳ್ಳಿಗೆ ನೀನೆ ತಾನೆ ಸುಗಂಧವು

ದೇಹ ಸರಿದರೂ ಮನಸು ಮರೆಯದ ನೆನವು ತಾನೆ ನಿನ್ನದು
ನಿನ್ನ ಕೊಳಲಿನ ಮಧುರ ಧ್ವನಿಗೆ ನಾದವಾಗಿಹ ಧ್ವನಿಯು ನಾ.

*********************
ಎಮ್.ಡಿ.ಎನ್.ಪ್ರಭಾಕರ್
******************