ವಸಂತವೆಲೇ ನೀ ಗೆಳತಿ
ನನ್ನ ಬರಡಾದ ಜೀವನಕೆ.
ಗಂಗೆಯ ಶೀತಲದ ಸುಳಿಗಾಳಿ
ನಿನ್ನ ಈ ನೆನಪಿನಹಂದರವು.
ಸಾವಿರ ನೋವುಗಳ ಬದಿಗೊತ್ತಿ
ಸುಖಿಸುವ ಒಲವ ಬಳ್ಳಿಗಳು
ನಿನ್ನ ನೆನೆಪುಗಳು.
ಸಾವಿರ ಹೂವುಗಳ ಸೌಂದರ್ಯ ಸಮವೇನೆ?
ನಿನ್ನ ಕುಡಿನೋಟದ ಮುಂದೆ.
ಹಿತವೆನಿಪ ಗಾಳಿಗೆ ಬಳ್ಳಿ ತಾ ಬಳುಕುವಂತೆ
ನಿನ್ನ ಈ ನಡೆದಾಟ.
ಹುಚ್ಚು ಹಿಡುಸುವ ಪರಿಯು
ನಿನ್ನ ಈ ಮುಗುಳ್ನಗೆಯು.
ಅದೆಂಥ ಕಾತರವೋ
ನಿನ್ನ ಕಾಣುವ ತವಕ
ಜೀವ ಬಿಗಿಹಿಡಿದಿಹೆನು
ಬಾರೆನ್ನ ಮನದನ್ನೆ .
ಜೀವ ತುಂಬಿದೆ ನೀನು
ಬಂಜರದ ಭೂ ಭಾಗ ಈ ನನ್ನ ಒಡಲು
ಬದುಕು ಹಸನಾಯಿತೀಗ
ಚಿಗುರೊಡೆದ ಹೂವಿನಂತೆ .
ನೀನು ವಸಂತವೆಲೇ ನನ್ನ ಬಾಳಿಗೆ.
*********************
ಎಮ್.ಡಿ.ಎನ್.ಪ್ರಭಾಕರ್
******************
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನೆರಳ ಬೆಳಕಿನಾಟ ಈ ಸಂಸಾರದ ಕೂಟ
ನಮ್ಮ ಬೆಂಗಳೂರು !!!
ವೇದ ಎಂದರೇನು ?
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)