ಗೆಲಿಲಿಯೋ ದೂರದರ್ಶಕವನ್ನ ನಿರ್ಮಿಸಿ ಮಾಡಿದ ಕ್ರಾಂತಿ ಗೊತ್ತೇ ಇದೆ. ಅವನು ಗುರುವಿನ ಸುತ್ತುತ್ತಿರುವ ಉಪಗ್ರಹಗಳನ್ನು ಮೊದಮೊದಲಿಗೆ ನೋಡಿದ ಮೇಲೆ, ಈ ನಾನೂರು ವರ್ಷಗಳಲ್ಲಿ ನಮ್ಮ ಸೌರಮಂಡಲವೇಕೆ, ಬೇರೆ ಬೇರೆ ನಕ್ಷತ್ರಗಳ ಸುತ್ತಲೂ ಇರುವ ಗ್ರಹಗಳ ಪತ್ತೆ ಬೇಕಾದಷ್ಟಾಗಿದೆ.
ಹೊರ-ಸೌರ-ಮಂಡಲಗಳನ್ನು ಹುಡುಕುವುದರಲ್ಲಿ ಲಿಕ್ ಅಬ್ಸರ್ವೇಟರಿಯ ಪಾತ್ರ ದೊಡ್ಡದು. ಇದು ಇರುವುದು ಕ್ಯಾಲಿಫೋರ್ನಿಯಾದ ಸ್ಯಾನ್ ಹೊಸೆ ಬಳಿಯ ಹ್ಯಾಮಿಲ್ಟನ್ ಬೆಟ್ಟದ ತಲೆಯ ಮೇಲೆ.
’ಅತಿ ಪರಿಚಯಾತ್ ಅವಜ್ಞಾ..’ ಅನ್ನುವ ಗಾದೆಯೇ ಇದೆಯಲ್ಲ - ದಿನ ನಿತ್ಯ (ದೂರದಿಂದ) ನೋಡುತ್ತಲೇ ಇದ್ದ ಲಿಕ್ ಅಬ್ಸರ್ವೇಟರಿಗೆ ಕೊನೆಗೂ ಒಂದು ಸಲ ಹೋಗೇ ಬಿಟ್ಟೆ; ___LINK_OPEN_href="http://neelanjana.wordpress.com/2009/06/03/a-long-drive-to-mt-hamilton/" target="_blank" title="ಮೌಂಟ್ ಹ್ಯಾಮಿಲ್ಟನ್ ಗೆ ಒಂದು ದೂರದ ಪಯಣ"___ಅಲ್ಲಿ ನಾನು ತೆಗೆದ ಕೆಲವು ಚಿತ್ರಗಳನ್ನು ನೋಡಲು ಇಲ್ಲಿ ಚಿಟಕಿಸಿ.
-ಹಂಸಾನಂದಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!