ಇಂಗ್ಲೀಷ್ ಭಾಷೆ ಕೆಲವೊಮ್ಮೆ ಎಷ್ಟು ಅವಾಂತರ ಮಾಡುತ್ತದೆ ಅನ್ನೋದಕ್ಕೆ ನಮ್ಮ ಆಫೀಸಲ್ಲಿ ನಡೆದ ಕೆಲವು ಘಟನೆಗಳನ್ನು ಕೇಳಿ.....

ನನ್ನ ಕಲೀಗ್ ಒಬ್ಳಿಗೆ (ಆಂಟಿ) ಅವಳ ಟೀಮ್ ಲೀಡರ್ ಒಂದು ಕೆಲಸ ವಹಿಸಿ ಈ ರೀತಿ ಮಾಡು ಅಂದ್ಲು, ಸ್ವಲ್ಪ ಹೊತ್ತಾದ ಮೇಲೆ ಮ್ಯಾನೇಜರ್ ಪಿಂಗ್ ಮಾಡಿ ಅದೇ ಕೆಲ್ಸನ ಬೇರೆ ರೀತಿ ಮಾಡು ಅಂದ್ಲು, ಇವ್ಳಿಗೆ ಕನ್ಫ್ಯೂಸ್ ಆಗಿ ನನ್ನತ್ರ ಬಂದು, ಚೇತನ್ I am in dynamo ಏನು ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ ಅಂತ‌ ಹೇಳೋದಾ.....

ಇವ್ಳನ್ನೇ ಇನ್ನೊಬ್ಬ ಕಲೀಗ್ (ಸಿಂಗ್) ಅವ‌ರ‌ ಮ‌ನೆಗೆ ಕ‌ರ್ಕೊಂಡು ಹೋಗಿದ್ದ, ಅವ್ರ ಅಮ್ಮಂಗೆ ಇವ್ಳು ಇವ್ನು ಊಟ‌ ಮಾಡ‌ಲ್ಲ ಅದು ಇದು ಅಂತ‌ ಏನೇನೋ ಹೇಳಿದ್ದಾಳೆ. ಇನ್ನೊಬ್ಬ ಆಂಧ್ರ ಹುಡುಗ (ಸುಮನ್) ಇದ್ದಾನೆ ಅವ್ನ ಮ‌ದುವೆ ಆಗಿ ಒಂದು 3 ತಿಂಗ‌ಳು ಆಗಿದೆ, ಟೀ ಕುಡೀತಾ ಎಲ್ಲರೂ ಮಾತಾಡ್ತಿದ್ವಿ, ಆಗ‌ ಸಿಂಗ್ ಇದ್ದವ‌ನು ಇವ್ನಿಗೆ 'Don't take her when your wife is in home ಅಂತ‌ ಹೇಳೋದಾ......

ಹೋದ‌ ತಿಂಗ್ಳು ಒಬ್ಬನ‌ ಹುಟ್ಟು ಹ‌ಬ್ಬಕ್ಕೆ (ರಾಹುಲ್ ಅಂತ) ಕೇಕ್ ಕ‌ತ್ತರಿಸಿರಲಿಲ್ಲ. ಈ ತಿಂಗ್ಳು ಇನ್ನೊಬ್ಬಳ‌ ಹುಟ್ಟು ಹ‌ಬ್ಬ ಇತ್ತು ಎಲ್ಲರೂ ಕೇಕ್ ಕ‌ಟ್ ಮಾಡ್ಬೇಕು ಅಂದ್ರು, ಆಗ‌ ಆಂಟಿ ಇದ್ದವ‌ಳು 'We will also cut Rahul's ಅಂತ‌ ಅನ್ನಬೇಕೇ.....