ಭಾವಕ್ಕೆ ಭಾವವಾದವಳು ನೀ
ಭಾವಗಳ ಬಿತ್ತಿದವಳು ನೀ
ಭಾವಗಳು ಬತ್ತುವದಿಲ್ಲ
ನೀ ಮರೆತು ಹೋಗುವದಿಲ್ಲ.

ಪ್ರೀತಿಯ ಕುಂಚಿಂದ
ಚಿತ್ತಾರ ಬಿಡಿಸಿದವಳು ನೀ
ಹತ್ತಾರು ಕನಸುಗಳ
ಬಿತ್ತಿ ಬೆಳೆದವಳು ನೀ
ನೀ ಕಳೆದು ಹೋಗುವದಿಲ್ಲ.

ಕಣ್ಣಲ್ಲಿ ಕಣ್ಣಿಟ್ಟು
ಪ್ರತಿಬಿಂಬವಾದವಳು ನೀ
ಕಿವಿಯಲ್ಲಿ ಪಿಸುಗುಟ್ಟಿ
ಮುತ್ತ ನಿಟ್ಟವಳು
ನೀ ಕಳೆದು ಹೋಗುವದಿಲ್ಲ.

ಹುಸಿಕೋಪ ತೋರುವವಳೇ
ಕಣ್ಣಲ್ಲಿ ಪ್ರೀತಿಯ ಕಡಲ ಹೊತ್ತವಳೇ
ನೀ ಕಳೆದುಹೊಗುವದಿಲ್ಲ
ಸದಾ ನನ್ನ ಕವಿಥೆಗಳಲಿ
"ಭಾವ"ವಾಗಿ ಉಳಿದೇ
ಉಳಿಯುತ್ತೀ.