(ಇದು ನಾ ಬರೆದುದಲ್ಲ. ನನ್ನನುಜ ಪೃಥ್ವೀರಾಜನಿಂದ ಸಂದೇಶದ ರೂಪದಲ್ಲಿ ಇಂದು ಬಂದ ಕವನ)
ಮಳೆಯಲ್ಲವಿದು
ಮಳೆಯಲ್ಲವಿದು
ಇದುವೆ ರುದ್ರ ತಾಂಡವ||
ಮೇಳೈಸಿದೆ
ಸಿಡಿಲ್ಮಿಂಚಿನ
ಹಿಮ್ಮೇಳದ ವೈಭವ||
ನೋಡುತಿರುವೆ
ನೋಡುತಿರುವೆ
ವಿಶ್ವರೂಪ ದರ್ಶನ||
ನಟರಾಜನ
ನಾಟ್ಯಶಾಲೆಯಲ್ಲಿ
ವಿಶೇಷ ಪ್ರದರ್ಶನ||
ಸಿಡಿಲೆ ಇಲ್ಲಿ ಚಂಡೆಯಾಗಿ
ಗುಡುಗೇ ಮೃದಂಗವಾಗಿ
ನಾದ ನಿನಾದ ವಿನೋದವಾಗಿ
ಆನಂದಭಾಷ್ಪ ಮಳೆಯರೂಪದಿ|||
ಪ್ರತಿಕ್ರಿಯೆ (5)