Archive.org ತಾಣದಲ್ಲಿ ಲಭ್ಯ ಇರುವ 'ಜ್ಞಾನದೇವನ ಬೋಧನೆಗಳು ' ಎಂಬ ಪುಸ್ತಕ ನೋಡಿದೆ. ಇದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಿಚಾರ ಸಾಹಿತ್ಯಮಾಲೆ ಅಡಿ ಪ್ರಕಟಿಸಿದೆ.

ಮರಾಠಿ ಸಂತ ಜ್ಞಾನೇಶ್ವರನ ಪರಿಚಯ ಈ ಪುಸ್ತಕದಲ್ಲಿ ಇದೆ ಆತ ಹಾಕಿ ಕೊಟ್ಟ ಅಡಿಪಾಯದ ಮೇಲೆಯೇ ನಾಮದೇವನು ಭಾರತಧರ್ಮವನ್ನು ಸ್ಥಾಪಿಸಿದನಂತೆ. ಅವನ ಔನ್ನತ್ಯವು ಅನುಪವಾಡಗಳಿಗಿಂತ ಹೆಚ್ಚಾಗಿ ಅವನ ಕೃತಿಗಳಲ್ಲಿ ಇದೆ ಅಂತೆ. ಅರ್ಜುನನನ್ನು ಯುದ್ಧಕ್ಕೆ ಹುರಿದುಂಬಿಸುತ್ತಲೇ ಅಹಿಂಸೆಯು ಒಂದು ಅತ್ಯುನ್ನತ ಮೌಲ್ಯ ಎಂಬ ಸತ್ಯವನ್ನು ಭಗವದ್ಗೀತೆ ಹೇಳುತ್ತದಂತೆ. ಆ ಭಗವದ್ಗೀತೆಯನ್ನೇ ಸಂತ ಜ್ಞಾನೇಶ್ವರನು ಮರಾಠಿ ಭಾಷೆಯಲ್ಲಿ ಜ್ಞಾನೇಶ್ವರಿ ಎಂದು ಹೆಸರಾದ ಭಾವಾರ್ಥ ದೀಪಿಕೆ ಎಂಬ ಕೃತಿಯಲ್ಲಿ ಹೇಳಿದ್ದಾನಂತೆ.