ನಮ್ಮ ಎಲ್ಲ ಅನುಭವಗಳು ಸಂಭವಿಸುವುದು ನಮ್ಮ ಮನಸ್ಸಿನಲ್ಲಿ. ನಮ್ಮ ಮನಸ್ಸಿನಲ್ಲಿ ಮೂಡುವ ಚೇತನದ ಪ್ರತಿಬಿಂಬವನ್ನು ಚಿದಾಭಾಸ ಎಂದು ಕರೆಯುತ್ತಾರೆ. ಚೇತನ ಚಿದಾಭಾಸದ ಮೂಲಕ ಮನಸ್ಸಿಗೆ ವಿಶೇಷವಾದ ಶಕ್ತಿಯನ್ನು ಕೊಟ್ಟಿರುತ್ತದೆ. ಈ ವಿಶೇಷವಾದ ಶಕ್ತಿಯಿಂದ, ಮನಸ್ಸು ಪ್ರಪಂಚದ ಅನುಭವವನ್ನು ನಮಗೆ ನೀಡುತ್ತದೆ. ಪಂಚೇಂದ್ರಿಯಗಳಿಂದ ಪ್ರಪಂಚದಲ್ಲಿ ನಡೆಯುವ ವಿವಿಧ ಬಗೆಯ ಚಟುವಟಿಕೆಗಳ ಸಂಕೇತಗಳನ್ನು ಗ್ರಹಿಸಿ, ಆ ಅನುಭವಕ್ಕೆ ಅರ್ಥವನ್ನು ಕೊಡುವುದು ನಮ್ಮ ಮನಸ್ಸು. ನಮ್ಮ ಮನಸ್ಸು ನಾಲ್ಕು ಬಗೆಯ ಕಾರ್ಯಗಳನ್ನು ನಿಭಾಯಿಸುತ್ತದೆ. ಅವುಗಳನ್ನು ಕ್ರಮವಾಗಿ ಮನಃ, ಬುದ್ಧಿ, ಅಹಂಕಾರ, ಚಿತ್ತ ಎಂದು ಕರೆಯುತ್ತಾರೆ.
(ಮುಂದುವರೆಯುತ್ತದೆ.)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!