ಕೆಲ ವಾರಗಳ ಮೊದಲು, ಬೇವಿನ ಮರದಿಂದ ಬರುತ್ತಿದ್ದ ಹಾಲಿನಂತಹ ಸಿಹಿ ದ್ರವವನ್ನು ಸಂಗ್ರಹಿಸಿ ಜನರು ಕುಡಿಯುತ್ತಿದ್ದುದನ್ನು ಟಿ.ವಿ.ಯಲ್ಲಿ ತೋರಿಸಿದ್ದರು. ಕಹಿ ಕಹಿ ಬೇವಿನಿಂದ ಸಿಹಿ ಹೇಗೆ ಬರಲು ಸಾಧ್ಯ? ಏನಾದರೂ ಕಣ್ಣುಕಟ್ಟು ಮಾಡಿರಬಹುದೆ? ಅಥವಾ ಕಳೆದ ಜನ್ಮದಲ್ಲಿ ಈ ಮರ "ಕಾಮಧೇನು"ವಾಗಿದ್ದು, ಈ ಜನ್ಮದಲ್ಲಿ ಬೇವಿನ ಮರವಾಗಿರಬಹುದೆ?
ಇಲ್ಲ. ಆನೆಗೆ ಮದ ಬರುವಂತೆ, ಬೇವಿನ ಮರಕ್ಕೂ "ಮದ" ಬರುವುದು!!
ನೀರು ಸಾಕಷ್ಟು ಪ್ರಮಾಣದಲ್ಲಿ ಸಿಗುವ ಸ್ಥಳದಲ್ಲಿ ಚೆನ್ನಾಗಿ ಬೆಳೆದ ಕೆಲ ಬೇವಿನ ಮರದ ಎಲೆ, ದೊಡ್ಡಕೊಂಬೆ ಅಥವಾ ಬೇರಿನಿಂದ ಹಾಲಿನ ಬಣ್ಣದ ತೆಳ್ಳಗಿನ ಸಿಹಿ ಸ್ರಾವ ಬರುವುದು.
೭ ವಾರಗಳವರೆಗೂ ಸ್ರವಿಸುವುದು. ೩-೪ ವರ್ಷಗಳ ಅಂತರದಲ್ಲಿ ಕೆಲ ಮರಗಳಲ್ಲಿ ಈ ತರಹ ಸುರಿದ ನಂತರ ಮರ ಒಣಗುವುದು.
ಮದ ಬಂದಾಗ ಮೊದಲಿಗೆ ಮರದಿಂದ ಒಂದು ಸಣ್ಣ ಧ್ವನಿ ಕೇಳುವುದಂತೆ! ನಂತರ ಹಾಲಿನಂತಹ ದ್ರವ ಸುರಿಯುವಾಗ ಧ್ವನಿ ನಿಲ್ಲುವುದಂತೆ!
(ಸಂಗ್ರಹ)
-ಗಣೇಶ.
ಬೇವಿನ ಗುಣಗಾನ ಮುಂದಿನ ಕಂತಲ್ಲಿ..
ಪ್ರತಿಕ್ರಿಯೆ (3)