ಎಲ್ಲ ಭಾಷೆಗಳಿಗೂ ತನ್ನದೇ ಆದ ಸೊಗಡು ಇರುತ್ತದೆ. ನಮ್ಮ ದೇಶದಲ್ಲಿ ಪ್ರತಿ ಒಂದು ಕಿಲೋ ಮೀಟರಿಗೆ ಒಂದು ಭಾಷಾ ವೈಶಿಷ್ಟ್ಯ ಕಾಣಬಹುದು. ಅದರಲ್ಲಿ ನಮ್ಮ ಉತ್ತರ ಕರ್ನಾಟಕ ಭಾಷೆ ಬೆಂಗಳೂರಿಗರಿಗೆ ಒಂದು ಸೋಜಿಗ. ಇಂದಿನ ಬೀChi ಎಂದೇ ಜನಪ್ರಿಯರಾಗಿರುವ ಗಂಗಾವತಿ ಪ್ರಾಣೇಶ ಇದೇ ಭಾಷೆಯ ಸೊಗಡಿನಿಂದ ಮನೆಮಾತಾಗಿರುವರು.
ಶಬ್ದಗಳು ಕನ್ನಡದ್ದೇ ಆದರೂ ಅದರ ಪ್ರಯೋಗ ಬಲು ವಿಭಿನ್ನ ಆಗಿರುತ್ತದೆ. ಒಗೆ ಎಂಬ ಪದ ಎಸೆ ಎಂಬ ಪದದ ಸಮಾನಾರ್ಥ ಪದ. ಆದರೆ ಉತ್ತರ ಕರ್ನಾಟಕದ ಜನ "ಒಗೆದ ಬಟ್ಟೆ ಹಾಕಿಕೋ" ಎಂದಾಗ ಬೆರಗಾಗಬೇಡಿ. ಎಸೆದ ಬಟ್ಟೆ ಎಂದರೆ ಬೇಡವಾದದ್ದು ಎಂದಾದರೂ, ಒಗೆದ ಬಟ್ಟೆ ಎಂದರೆ ಶುಭ್ರ ವಸ್ತ್ರ ಎಂದರ್ಥ!
ಇದರ ಮೂಲ ಏನಂದರೆ, ಬಟ್ಟೆ ಶುಭ್ರ ಮಾಡುವ ವಿಧಾನಕ್ಕೆ ಒಗೆಯುವುದು ಎನ್ನುವದು. ಎತ್ತಿ ಎತ್ತಿ ಕಲ್ಲಿನ ಕಟ್ಟೆಯ ಮೇಲೆ ಒಗೆದಾಗ ಬಟ್ಟೆ ಶುಭ್ರವಾಗುತ್ತದೆ. ಹೀಗಾಗಿ ಶುಭ್ರ ಬಟ್ಟೆ ಅಂದರೆ ಒಗೆದ ಬಟ್ಟೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!