ಕಾಗೆಯು ಕಪ್ಪು ಕೋಗಿಲೆ ಕಪ್ಪು
ಹೇಗವುಗಳ ಬೇರ್ಪಡಿಸುವುದು?
ವಸಂತ ಕಾಲವು ಬಂದಿರಲು
ತನ್ನಲೆ ತಾನೇ ತೋರುವುದು!
ಸಂಸ್ಕೃತ ಮೂಲ:
ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದೋ ಪಿಕ ಕಾಕಯೋಃ |
ವಸಂತಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ||
-ಹಂಸಾನಂದಿ
ಕೊಸರು: ಮಾರ್ಚ್ ೨೦, ೨೦೧೦ರಂದು ___LINK_OPEN_title="ಸಮಹಗಲಿರುಳು" href="http://hamsanada.blogspot.com/2008/09/blog-post_22.html" target="_blank"___ಸಮಹಗಲಿರುಳು - ವಸಂತದ ಮೊದಲ ದಿನ. ಅದಕ್ಕೇ ಇರಬೇಕು, ಈ ಸುಭಾಷಿತ ಇನ್ನೊಮ್ಮೆ ನೆನಪಾದದ್ದು!
ಪ್ರತಿಕ್ರಿಯೆ (1)