ನನ್ನ ಸ್ನೇಹಿತನೊಬ್ಬನಿಗೆ ಒಂದು ಶಾಲೆ ( ಒಂದರಿಂದ ಕ್ರಮೇಣ ಹತ್ತರವರೆಗೆ ) ತೆರಿಬೇಕು ಅನ್ನೋ ಹಂಬಲ. 

ಶಿಕ್ಷಣದ ಬಗ್ಗೆ, ಮಕ್ಕಳ psychology ಬಗ್ಗೆ  ಅಲ್ಪ ಸ್ವಲ್ಪ ಓದಿಕೊಂಡಿದ್ದಾನೆ?. 

 

ಆತನಲ್ಲಿ ಕೆಲ ಪ್ರಶ್ನೆಗಳಿವೆ. ನಿಮ್ಮಲ್ಲಿ ಯಾರಿಗಾದರೂ ಹೆಚ್ಚಿನ ವಿವರಣೆ ಗಳನ್ನೂ, ಅನುಭವಗಳನ್ನೂ ಹಂಚಿಕೊಳ್ಳಲು ಆಗುತ್ತಾ ನೋಡಿ.

 

ನಿಮ್ಮ ಪ್ರತಿಕ್ರಿಯೆಗಳಿಗೆ ಎದುರು ನೋಡ್ತಾ ಇರ್ತೀನಿ.

 

೧. ಯಾವ ಶಿಕ್ಷಣ ಮಾಧ್ಯಮ (ಮೀಡಿಯಂ) ಒಳ್ಳೆಯದು. ( ಕನ್ನಡ / ಇಂಗ್ಲೀಶ್) --- ಯಾಕೆ ?  

೨. ಯಾವ syllabus ಒಳ್ಳೆಯದು? ಕರ್ನಾಟಕ ರಾಜ್ಯ, ICSE , CBSE ?   -- ಯಾಕೆ ?

೩. ಆತನೂ ಮಧ್ಯಮ ವರ್ಗದವನೇ ಅದ್ದರಿಂದ .. ಆತನಿಗೆ ಹಾಕಿದ ಬಂಡವಾಳ ಕಳೆದುಕೊಳ್ಳಲು ಇಷ್ಟವಿಲ್ಲ. ಹಾಗಂತ ಹಣವೊಂದೇ ಆತನ ಉದ್ದೇಶವೂ ಅಲ್ಲ. 

ಹಾಗಾಗಿ ಈ ಕ್ಷೇತ್ರದಲ್ಲಿ  ಹಣ ತೊಡಗಿಸುವುದು ಎಷ್ಟರ ಮಟ್ಟಿಗೆ ಪ್ರಾಕ್ಟಿಕಲ್?!

೪. ಮತ್ತೇನಾದರೂ ವಿಷಯಗಳು?!