ದಿಬ್ಬಣ
ಹೊರಗೆ ಜಡಿಗುಟ್ಟುವ ಮಳೆ,
ಮನೆಯ ತುಂಬೆಲ್ಲಾ ಮೌನ
ಮನೆ ಮಾತ್ರ ಮಾತಾಡುತ್ತಿದೆ....
ಹಸನಾದ ಭುವಿಗೆ,
ಮಧುವಣಗಿತ್ತಿಯ ಸಿಂಗಾರ
ದಿಬ್ಬಣ ಹೊರಟಿವೆ
ಕನಸುಗಳು.....
ಒದ್ದೆ ನೆಲದ ತುಂಬೆಲ್ಲಾ,
ಹೆಜ್ಜೆಯ ರಂಗವಲ್ಲಿ
ಬಣ್ಣ ಬಳಿವರಾರು ಗೊತ್ತಿಲ್ಲ...
ತೊಟ್ಟಿಕ್ಕುವ ಮಳೆಗೆ ,
ಜಗವೆಲ್ಲ ಸಂಭ್ರಮ
ಅಂಗಳದ ತುಂಬೆಲ್ಲಾ ಕರೆಗಟ್ಟಿದ
ನೀರು....
ಕಾಗದದ ದೋಣಿಗೂ,
ಚುಕ್ಕಾಣಿ...
ಸಿಂಗರಿಸಿಕೊಳ್ಳುತ್ತಿವೆ ಕನಸುಗಳು
ಹೊಸಪಯಣಕ್ಕೆ....
ಪವಿತ್ರ ಪ್ರಶಾಂತ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮಳೆಯಲ್ಲಿ ಒ೦ದಷ್ಟು ಹೊತ್ತು......
ಮಳೆಯಲ್ಲಿ ಒ೦ದಷ್ಟು ಹೊತ್ತು......
ಪತಿಯ ಪ್ರೇಯಸಿಗೊ೦ದು ಪತ್ರ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (11)