ನೆನಪುಗಳು
ಗತಕಾಲ ಜೀವನದ
ಹೆಜ್ಜೆಯ ಗುರುತುಗಳು
ನಾಳಿನ ದಿನಗಳಿಗೆ
ದಾರಿ ದೀಪಗಳು
ನೆನಪುಗಳು
ಬಯಸಿ ಬೇಕೆಂದು ಮನದಲ್ಲಿ
ಮೆಲುಕು ಹಾಕಿ ಕರೆದಾಗ
ಮರೆವಿನ ತೆರೆಯ ಹಿಂದೆ
ಅಣಕಿಸಿ ನಗುವುವು ಕೆಲವೊಮ್ಮೆ
ನೆನೆಪುಗಳು
ಮರೆಯಬೇಕೆಂದು
ಮನಸ್ಸು ಮಾದಿದಾಗ
ಮತ್ತೆ ಮತ್ತೆ ಮರುಕಳಿಸಿ
ಮರೆತು ಹೋದ ನೋವುಗಳಿಗೆ
ಮತ್ತೆ ಹೊಸಜೀವ ತುಂಬಿ
ಸೂಜಿಮೊನೆಗಳಂತೆ ಚುಚ್ಚಿ
ಕೆಣಕಿಸಿ ನಗುವುವು ಹಲವೊಮ್ಮೆ
--ಕೆ.ಆರ್.ಮೌನೇಶ
ಪ್ರತಿಕ್ರಿಯೆ (2)