ಬಸ್ಸಿನಲಿ ಒಂಟಿ ಸ್ತ್ರೀ ಕುಳಿತಿರುವ  ಜಾಗ
    ಸಿಕ್ಕಿತೆಂದರೆ ಅವಗೆ ಅದು ರಾಜಯೋಗ

    ಪಯಣದ ನಡುನಡುವೆ ಚಾಲಕನ ಬ್ರೇಕು
    ಒರಗಿಕೊಳ್ಳಲು ಅವಗೆ ಅಷ್ಟೆ ಖುಷಿ ಸಾಕು

   ಸ್ವಲ್ಪ ಸಮಯವು ಕಳೆಯೆ ನಾಟಕದ ನಿದ್ದೆ
   ಭುಜ ಅಲುಗಿ ತಲೆ ತಗುಲಿ ಸ್ಪರ್ಷಸುಖ ಗೆದ್ದೆ

    ಕಣ್ಣಕೊನೆಯಿಂದಲೇ ಅವಳೆಡೆಗೆ ನೋಟ
    ಒಲಿದರಿವಳು ಎನಗೆ ಇಂದು ರಸದೂಟ

   ಕೇಳಿಯೇ ಬಿಟ್ಟನಿವ ಯಾವೂರು ನಿಮದು
   ಮನದಲ್ಲಿಯೇ ನಕ್ಕ ಈ ಪಯಣ ಸಿಗದು

   ಬಾಯ್ಮುಚ್ಚಿ ಕುಳಿತಿಹಳು ಬಸವಳಿದ ಕಾಂತೆ
   ಬಾಯ್ತೆರೆದ ಇವೆನೆಡೆಗೆ ಸುರಿಸಿದಳು ವಾಂತಿ

   ಇವನ ಪೇಚಾ..ಟಕ್ಕೆ ಜನರೆಲ್ಲ ನಗಲು
   ಅಂದಿನಿಂದಲೆ ಬಿಟ್ಟ ನೀಚಸುಖ ತೆವಲು

      -ಭಾಗ್ವತ್