೧) ಭಗವಂತ ಉಳಿದ ಆರು ದಿನಗಳಲ್ಲಿ ಲೋಕವನ್ನು ಸೃಷ್ಟಿಸಿ ರವಿವಾರ ರೆಸ್ಟು ತಗೊಂಡ ಅಂತೆ. ಅವನೇ ರೆಸ್ಟ್ ತೆಗೊಂಡಿರುವಾಗ ನಾವು ಏಕೆ ಕೆಲಸ ಮಾಡಬೇಕು. ಸೋಮಾರಿತನಕ್ಕೆ ಜೈ

೨) ಬೋಸ್ ಹೇಳಿದ್ರು, ಸೋಮಾರಿತನ ನಿಮ್ ಶತ್ರು ಅಂತ. ಗಾಂಧಿಜಿ ಹೇಳಿದ್ರು 'ಶತ್ರು ನ ಪ್ರೀತಿಸಿ'. ನಾನಂತೂ ಇಬ್ಬರಿಗೂ ಗೌರವ ಕೊಡ್ತೇನಪ್ಪ.. ಅದಕ್ಕೆ ಇನ್ನೂ ಬೆಡ್ ನಿಂದ ಏಳದಿರೋದು [ಸಂದೇಶ ಆಧಾರಿತ]

೩) ಭಗವಂತ ಎಲ್ಲರಿಗೂ ಅದ್ಭುತ ಪ್ರತಿಭೆ ಕೊಟ್ಟಿದ್ದಾನೆ. ನನಗೂ ಕೊಟ್ಟಿದ್ದಾನೆ, ನಿದ್ದೆ. ಅದಕ್ಕೆ ಇನ್ನೂ ಮಲಗಿಕೊಂಡಿದ್ದೀನಿ. ಆದ್ರೆ ಈ ರವಿವಾರ ಬಿಟ್ಟು ಬೇರೆ ದಿನ ಈ ಹಾಳು ಕಂಪನಿಯೋರು ಮಲಗಕ್ಕೆ ಬಿಡಲ್ಲ.

೪) ಭರತ್ ಮೆಲ್ಲನ ಅಂದ 'ಸ್ಯಾಂಟಿ, ತಿಂಡಿಗೆ ಏನು ಮಾಡೋದು?' ನಾನೆಂದೆ 'ಮನೆಯಲ್ಲಿ ಏನೂ ಇಲ್ಲ, ಹೋಗಿ ಹಾಲು ಬ್ರೆಡ್ಡು ತಗೊಂಡು ಬಾ. ಪಾತ್ರೆ ತೊಳೆದು ಕಾಫಿ ಮಾಡಿಡು' ಅದಕ್ಕೆ ಅವನೆಂದ 'ತಿನ್ನಿಸುವುದು ಬೇಡವಾ' ನಾನೆಂದೆ 'ಬೇಡ, ಅದಕ್ಕೆ ಏಳಬೇಕಾಗುತ್ತೆ'

೫) ಕನಸುಗಳನ್ನು ನನಸು ಮಾಡಲು ಕನಸು ಕಾಣುವುದು ಮುಖ್ಯ, ಅದಕ್ಕೆಂದೇ ರವಿವಾರ ಇಡೀ ದಿನ ಬಿದ್ಕೊಂಡಿರೋದು, ಉಳಿದ ದಿನ ಆಫೀಸು. ಕನಸು ಕಾಣಲು ಬಿಡಲ್ಲ ನನಸು ಹೇಗಿದ್ರು ಮಾಡಲ್ಲ.

ಇನ್ನೂ ಹೆಚ್ಚು ಕುಯ್ಯಲ್ಲ. ನಿದ್ದೆ ಬರ್ತಾ ಇದೆ... :)