ಎಸ್.ಎಲ್.ಭೈರಪ್ಪನವರ ಅಭಿಮಾನಿಗಳಿಗ ಒಂದು ಸಂತಸದ ಸುದ್ದಿ. ಈಗ ಜನಪ್ರಿಯ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪನವರು ತಮ್ಮದೇ ಆದ ಅಧಿಕೃತ ವೆಬ್ ಸೈಟನ್ನು ಹೊಂದಿದ್ದಾರೆ.
ಈ ತಾಣ ಭೈರಪ್ಪನವರ ಸ್ವವಿವರದ ಜೊತೆಗೆ, ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳ ಪಟ್ಟಿ ,ಅಭಿನಂದನಾರ್ಹ ಕೃತಿಗಳ ಪಟ್ಟಿ ಮುಂತಾದ ಸಾಕಷ್ಟು ವಿವರಗಳನ್ನೊಳಗೊಂಡಿದೆ.. ಜೊತೆಗೆ ಫೋಟೊಗಳೂ/ವಿಡಿಯೊಗಳು ಇವೆ. ಅಲ್ಲದೇ ಅವರ ಪ್ರಕಟಿತ ಕೃತಿಗಳು, ಮುದ್ರಣಗೊಂಡ ವರ್ಷ, ಸಂಖ್ಯೆ ಮುಂತಾದ ಮಾಹಿತಿಗಳು, ಭೈರಪ್ಪ ನವರ ಕೃತಿಗಳ ಕಿರು ಪರಿಚಯ ಇಲ್ಲಿ ಕೊಟ್ಟಿದ್ದಾರೆ.
ಓದುಗರು ಅಭಿಪ್ರಾಯ ವ್ಯಕ್ತಪಡಿಸಲು ತಾಣದಲ್ಲಿ ಅವಕಾಶ ಕಲ್ಪಿಸಿದ್ದಾರೆ..ಹಾಗೇಯೇ ಭೈರಪ್ಪನವರು ತಮಗಾಗಿ Author's view ನ್ನು ಇಟ್ಟುಕೊಂಡಿದ್ದಾರೆ. ಭೈರಪ್ಪನವರ ಮನೆ ಹಾಗೂ ಸಂಪರ್ಕ ವಿಳಾಸ ಕೂಡಾ ಇಲ್ಲಿ ಲಭ್ಯವಿದೆ.
ಸಧ್ಯಕ್ಕೆ ಪೂರ್ತಿ ತಾಣ ಅಂಗ್ಲಮಯವಾಗಿದೆ. ಶೀಘ್ರದಲ್ಲಿ ಕನ್ನಡ ಅವತರಣಿಕೆಯೂ ಬರಲಿ ಎಂದು ಹಾರೈಸೋಣ.
ಅಂತರ್ಜಾಲ ತಾಣದ ವಿಳಾಸ :
http://www.slbhyrappa.com/default.html
ಪ್ರತಿಕ್ರಿಯೆ (3)