ಅವನೇನೆಲ್ಲಾ ಮಾಡಿದ್ದ !
ಕೂಲಿ ಮಾಡುವ ತಾಯಿ..
ಇವನ ಮದುವೆಗಾಗಿ ಕೂಡಿಸಿಟ್ಟ ಹಣ .....!
ಹಸಿರು ಹರಳಿನ ನತ್ತು
ತವರು ಮನೆ ಬಳುವಳಿಯ ಪಾತ್ರೆ
ಎಲ್ಲವನ್ನೂ......
ವೇಶ್ಯೆಯ ಸಂಗ ಬಯಸಿ..
ಕದ್ದೊಯ್ದು ಮಾರಿದ್ದ !
ಆದರೂ ತೃಪ್ತಿಯಿಲ್ಲ
ರಾತ್ರಿಯ ಅಮಲಿನಲ್ಲಿ.....
ವೇಶ್ಯೆಯ ದುರಾಸೆ ತೀರಿಸಲು
ದಣಿವಾರಿಸಿಕೊಳ್ಳಲು
ನಿದ್ರಿಸಿದ್ದ ತಾಯಿಯ ಹೃದಯ
ಕತ್ತರಿಸಿ ಬೊಗಸೆಯಲ್ಲಿಡಿದು ಓಡಿದ !
ಆಗ.....ಮಾತೃ ಹೃದಯ ಮಾತಾಡಿತು !
"ಮಗು ಓಡದಿರು ಕತ್ತಲೆಯಲ್ಲಿ
ಎಡವಿ ಬಿದ್ದರೆ ಪೆಟ್ಟಾದಿತು ಕೈ ಕಾಲಿಗೆ !"
ಅವನ ಕಣ್ಣಲ್ಲಿ ನೀರಿತ್ತು
ಹೇ....ಮಾತೆ !
ಮಕ್ಕಳ ಎಷ್ಟೆಲ್ಲಾ ತಪ್ಪುಗಳನ್ನು
ಕ್ಷಮಿಸುವ ಕ್ಷಮಯಾ ಧರಿತ್ರಿ
ನಿನಗೆ ಕೋಟಿ ಕೋಟಿ ನಮನ
-ಭಾಗ್ವತ್
( ಬೀಚಿಯವರ ಭಾಷಣದ ಕಥೆಯಾಧಾರಿತ )
ಪ್ರತಿಕ್ರಿಯೆ (4)