ಮನಕೆ ತಂಗಾಳಿಯಂತೆ
ಮನಕೆ ಮತ್ತೇರಿದಂತೆ
ಬಂದೆ ನೀನು ಇಂದು
ಹೃದಯ ಗುನುಗುನಿಸುತಿದೆ ಇನಿದು

ಅರಿತಂತಿದೆ ಇಂದು ಮನದ ಎಲ್ಲ ಭಾವಗಳ
ಸರಿಸಿ ಎಲ್ಲ ದೂರ ಸೇರು ನೀ ಇನಿಯನಂಗಳ

ಇಂದು ಮತ್ತೆ ಬಾನಿಗೆ ರಂಗೇರಿದೆ
ಮನದಲ್ಲಿ ಭಾವಗಳು ತೊಯ್ದಾಡಿದೆ
ನಿನ್ನ ಕಂಡು ಇಂದು
ಹೃದಯ ಗುನುಗುನಿಸುತಿದೆ ಇನಿದು

ಈಗ ಪ್ರತಿ ಮುಂಜಾನೆ ಮಧುರವಾಗಿದೆ
ನಿನ್ನ ಕಂಡು ಇಂದು ಹೃದಯ ಆಯ ತಪ್ಪಿದೆ
ನಿನ್ನ ಕೋರಿ ಕರೆದಿದೆ ಈ ಹೃದಯ ಇಂದು
ನಿನ್ನ ಕಂಡು ಇಂದು
ಹೃದಯ ಗುನುಗುನಿಸುತಿದೆ ಇನಿದು