ಕುದಿಯುತ್ತಿದೆ ಕುದಿಯುತ್ತಿದೆ ಬೆಳದಿಂಗಳ ತಾಪಕ್ಕೆ ನನ್ನೆದೆ ಕುದಿಯುತ್ತಿದೆ

ಕುಡಿನೋಟದ ನೆನಪಿಗೆ ಬತ್ತಿದೆ, ಬತ್ತಲಾರದ ಬಯಕೆ,

ಬಯಸದೆ ಬಯಕೆಯ ಹೊತ್ತಿಸಿ ಬರದೂರಿಗೆ ನೆಡೆದೆಯಲ್ಲ,

ನಿನ್ನಾಟ ಸರಿಯೇ

ಕಳಚಿತೆ ಆಣೆಗಳ ಸೌಧ ಮುರಿಯಿತೆ ಮಾತು ಮೌನಗಳ ಕೊಂಡಿ

ಹೊತ್ತಲ್ಲದ ಹೊತ್ತಲ್ಲಿ ಕಿಚಿಟ್ಟು ನೆಡೆದೆಯಲ್ಲ ಬರದೂರಿಗೆ ನೆಡೆದೆಯಲ್ಲ,

ನಿನ್ನಾಟ ಸರಿಯೇ

ಕೆರೆ ಮೇಲಿನ ನೆನಪು, ಹೊಳೆ ದಂಡೆಯ ನೆನಪು, ರಂಗೋಲಿಯ ನೆನಪು,

ಸಂಬ್ರಾಣಿ ಸುಪ್ರಭಾತದ ನೆನಪು

ಈ ನೆನಪಿನ ಸುಳಿಯೊಳಗೆ ಕುದಿಯುತ್ತಿದೆ ನನ್ನೆದೆ ಬೆಳದಿಂಗಳ ತಾಪಕ್ಕೆ .