ಖಾಲಿ ರೋಡು,
ಭಣಗುಟ್ಟುವ ಬಿಸಿಲು
ಅವನೊಂದಿಗೆ
ನಡೆಯುತಿರುವ ಮನಸ್ಸಿಗೆ
ಕೊನೆಯಾಗದ ತುಮುಲ,
ಮತ್ತದೇ ಪ್ರಶ್ನೆ
ಕಳೆದುಹೋದವರ ಮಧ್ಯೆ
ಹುಡುಕುತ್ತಿರುವ ಯಾರನ್ನು?
ಒಂಟಿ ನೆರಳಿನ ನೀರವತೆಯಲ್ಲಿ
ಕೇಳುವ ಬಿಕ್ಕಳಿಕೆ
ಅಲ್ಲಲ್ಲಿ ಕಾಣುವ ಹೆಜ್ಜೆ ಗುರುತುಗಳು
ರಕ್ತದ ಕಲೆಗಳು
ಒಣಗಿದ ಮರಗಳು
ಮುರಿದ ಹೃದಯಗಳು
ಕೊನೆಯಿರದ ದಾರಿ
ಹೆದರಿದ ಮನಸ್ಸಿಗೆ ಮತ್ತದೇ ಗೊಂದಲ
ಇವನು ಮಾಡುತ್ತಿರುವುದಾದರೂ ಏನು?
ಅವನಿನ್ನೂ ಮೌನವಾಗಿದ್ದ
ಮಾರು ದೂರ ನಡೆವಷ್ಟರಲ್ಲಿ
ಮನಸ್ಸಿಗೂ ಅರ್ಥವಾಗಿತ್ತು,
"ಕಳೆದು ಹೋದವರ ಮಧ್ಯೆ
ಆತ ಹುಡುಕುತ್ತಿರುವುದು ನನ್ನನ್ನು!"