ಮನಸ್ಸಿಗಿನ್ನೂ ಹಂಬಲ ಕಂಡ ಕನಸ ಕಟ್ಟಬೇಕು
ಒಂಟಿ ಕೈಯಿದು, ಇದಕ್ಕೆ ಆಸರೆಯಾಗಿ ನಿಮ್ಮ ಬಲ ಬೇಕು

ನಿಮ್ಮ ಆಸರೆಯಿಂದ ಲೋಕವ ಗೆಲ್ಲುತ್ತೇನೆ ಎಂದೇನಲ್ಲ
ನನ್ನಂತೆಯೇ ಕನಸ ಕಾಣುವವರಿಗೆ ಇದು ಸಿಹಿ ಬೆಲ್ಲ

ನಾ ಕಂಡ ಕನಸು ಏನೆಂದು ಕೇಳದಿರಿ
ಜೊತೆಯಾಗಿರುವೆವು ಎಂಬ ಭರವಸೆ ನೀಡಿರಿ

ನಿಮ್ಮೊಂದಿಗೆ ನಾನಾಡುವ ಮಾತು ಕಹಿ ಇರಬಹುದು
ಸತ್ಯವನೆ ಹೇಳುವೆ, ಅರಿವಾದಲ್ಲಿ ನೀವೂ ಅನ್ನುವಿರಿ ಅಹುದು

ಅರ್ಥ ಮಾಡಿಕೊಳ್ಳಿ ನನ್ನ ಮನದ ಮಾತು
ನನಗಿಲ್ಲ ನಿಮ್ಮ ಮೇಲೆ ಯಾವುದೇ ವೈಮನಸ್ಸು

ಕನಸ ಕಟ್ಟಬೇಕು ಎಂದು ಮನಸ್ಸಿಗಿನ್ನೂ ಹಂಬಲ
ನಿಮ್ಮ ಕನಸೂ ಅದೇ ಆಗಿದ್ದಲ್ಲಿ ದೊರೆಯುವುದು ನನಗಿಷ್ಟು ಬೆಂಬಲ

ಬೆಳೆಸುತ್ತಾ ಉಳಿಸಿಹೊಗುವೆವು ನಾವು ಪಳೆಯುಳಿಕೆ
ಆಗಲಿ ನಮಗೂ ಮುಂದೆ ಬರುವವರಿಗೂ ನನ್ನ ಕನಸಿನ ಉಳಿಕೆ

ನನ್ನ ಕನಸ ಕಂಡು ನಿಮಗಿಷ್ಟವಿಲ್ಲದಲ್ಲಿ ಚಿಂತೆ ಎನಗಿಲ್ಲ
ನೀವು ನನ್ನಂತಿರಬೇಕು ಎಂಬ ಭಾವನೆ ನನದಲ್ಲ

ಇಂದಿಗೂ ಅವೇ ಕಣ್ಣೆವೆಗಳಲ್ಲಿ ಕಾಯುತಿದೆ ಕನಸು
ಭಯವೊಂದೇ, ಆಭಾಸವಾಗದಿರಲಿ ಬದುಕು

 

[ಸಂಪದದಲ್ಲಿ ತುಂಬಾ ದಿನಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಹೊರ ಬರುತ್ತಿರುವ ಬರವಣಿಗೆ ಶುದ್ಧತೆ ಮತ್ತು ಭಾಷೆಯ ಮೇಲಿನ ಕಲಹಗಳ ಕುರಿತು ಮನಸ್ಸು ಬರೆದದ್ದು]