"ಹೆಗಡೆ ಎಂಬ ಒಡನಾಡಿಯ ನೆನಪು" ಎಂಬ ಶಿರ್ಷಿಕೆಯಲ್ಲಿ ದೇವೇಗೌಡರು ರಾಮಕೃಷ್ಣ ಹೆಗಡೆಯವರೊಂದಿಗೆ ತಮ್ಮ ರಾಜಕೀಯ ಒಡನಾಟದ ಬಗ್ಯೆ ಇವತ್ತಿನ (ಭಾನುವಾರ ೨೯-೦೮-೧೦)ರ ವಿಜಯಕರ್ನಾಟಕದಲ್ಲಿ ಲೇಖನ ಬರೆದಿದ್ದಾರೆ. ಬಹಳ ಆತ್ಮೀಯವಾದ ಬರಹ. ದೇವೇಗೌಡರು ಚೆನ್ನಾಗಿ ಬರೆಯುತ್ತಾರೆ ಅಂತ ಇತ್ತೀಚೆಗೆ ಎಲ್ಲಿಯೋ ಓದಿದ್ದೆ. ಇದನ್ನು ಓದಿದರೆ ನಿಜ ಅನ್ನಿಸಿತು.
ಅವರ ಸದ್ಯದ ರಾಜಕೀಯದ ಚಟುವಟಿಕೆಗಳ ಬಗ್ಯೆ ನಮ್ಮ ಅಭಿಪ್ರಾಯ ಹೇಗೇ ಇರಲಿ, ಅವರ ವ್ಯಕ್ತಿತ್ವದ ಒಂದು ಸೂಕ್ಷ್ಮ ಮುಖದ ಪರಿಚಯ ಈ ಲೇಖನದಿಂದ ಆಗುತ್ತದೆ.
ಪ್ರತಿಕ್ರಿಯೆ (4)