ಓ ಮನವೇ ಓ ಮನವೇ
ಬಡತನಕೆ ಕೊರಗದಿರು
ಸುಖ ಸಿರಿತನವದು
ಬಿಸಿಲ ಕುದುರೆ...........
ನಿಜವಾದ ಸಿರಿತನವು ಬಡತನವಲ್ಲವೇ
ಒಪ್ಪತ್ತು ಗಂಜಿಯನು ಕುಡಿದರೂ.......
ಸಿರಿತನವೆಂಬುದದು ಮಯಾಮೄಗವೇ
ಬೆನ್ಹತ್ತಿ ಅದರಿಂದೆ ಓಡದಿರು.............
ಕಾರ್ಮುಗಿಲು ಕವಿದರೂ ಬೆಚ್ಚನೆಯಾ ಗುಡಿಸಲು
ಮಂದನೆಯ ಕಂದೀಲ ದೀಪಾ........................
ಸಿರಿತನಕೆ ಎಲ್ಲುಂಟು ಈ ಪರಿಯದಾ ಸುಖಾ
ನಿರಂತರ ತಂಪು ಗಳಿಯಾ ಕೋಪಾ..................
ಗುಡಿಸಲಾ ಮುಂದಿನ ರಂಗೋಲಿ ನಗು ನಗುತ
ಕೋರುವದು ಸ್ವಾಗತವ ದಣಿದ ಮನಕೆ..........
ಮೂಜಗದ ನೆಮ್ಮದಿಯು ಮುಖದಲ್ಲಿ ಮಿನುಗುತಾ
ಆಹ್ವಾನಿಸುವುದು ಪ್ರೀತಿಯಾದರಕೆ............
ಬಡವನು ನೀನು ಬಡವಿಯು ನಿನ್ನ ಮಡದಿ
ಸುಖದಾನಂದ ಸದಾ ಬದುಕು...............
ಬಡತನದ ಬಂಗಾರ ಕೊನೆತಕವೂ ಇರಲಿ
ನಗುವಿನಲೆಗಳನು ನೀನು ಕುಲುಕು........
ಪ್ರತಿ........
ಪ್ರತಿಕ್ರಿಯೆ (2)