ಸಖೀ,
ನಿನ್ನ ಪ್ರೀತಿಯೇ
ನನ್ನ ಬರಹಗಳಿಗೆ
ಸ್ಪೂರ್ತಿ ಎಂದು
ಸಾರಿ ಸಾರಿ
ಹೇಳುವ
ನಾನು,
ನಿನ್ನ ಪ್ರೀತಿಗೇ
ಅವಮಾನ
ಮಾಡುವ
ಪದಬಳಕೆ
ಮಾಡಿದರೆ
ಹೇಗಿದ್ದೀತು ಹೇಳು;

ನಾನು ಬಳಸುವ
ಭಾಷೆ, ಪದಗಳು,
ನನ್ನ ಮಾತಾಪಿತರು
ನನಗೆ ಕೊಡಮಾಡಿದ
ಸಂಸ್ಕಾರಕ್ಕೇ ಅವಮಾನ
ಮಾಡುವಂತಿದ್ದರೆ
ಹೇಗಿದ್ದೀತು ಹೇಳು;

ನಾನು
ಮಡಿವಂತನೋ,
ಮಾನಗೆಟ್ಟವನೋ,
ಎಂಬುವುದನು
ನನ್ನ ಮಾತುಗಳಿಂದ,
ನನ್ನ ನಡತೆಗಳಿಂದ,
ನನ್ನ ಪದಬಳಕೆಯಿಂದ,
ನೀನು ನಿರ್ಧರಿಸಬಹುದು
ನೀ ಕೇಳು,

ಮಡಿವಂತರ ನಡುವೆ
ಮಾನಗೆಟ್ಟವನಾಗಿ
ಬಾಳುವುದಕ್ಕಿಂತ,
ಮಾನಗೆಟ್ಟವರ
ನಡುವೆ
ಮಡಿವಂತನಾಗಿ
ಇರುವುದೇ
ನಿಜವಾಗಿಯೂ ಸಹ್ಯ,
ಅಲ್ಲವೇ ಹೇಳು!
*********
ಆತ್ರಾಡಿ ಸುರೇಶ ಹೆಗ್ಡೆ